ಮಂಗಳವಾರ, ಡಿಸೆಂಬರ್ 20, 2022

‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ : 'ಅಲ್-ಕಬೀರ್ ಶಾಲೆ’

 ‘ಒಲವು ಫೌಂಡೇಶನ್ (ರಿ)’ ಹಾಗೂ ‘ಏ. ಎಸ್. ಜೆ. ಕಣ್ಣಿನ ಆಸ್ಪತ್ರೆ’ ಸಹಯೋಗದಲ್ಲಿ

ಶಾಲಾ ಮಕ್ಕಳಿಗೆ ‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ ಅಭಿಯಾನ











ಮೈಸೂರು ೨೦ ಡಿಸೆಂಬರ್ ೨೦೨೨ : ‘ಒಲವು ಫೌಂಡೇಶನ್ (ರಿ)’ ಹಾಗೂ ‘ಏ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಅಕ್ಟೋಬರ್ ೧೩ ಮತ್ತು ೧೪ನೇ ತಾರೀಖಿನಂದು ‘ವಿಶ್ವ ದೃಷ್ಟಿ ದಿನಾಚರಣೆ’ ಅಂಗವಾಗಿ ಶಾಲಾ ಮಕ್ಕಳಿಗೆ ಕಣ್ಣಿನ ಬಗ್ಗೆ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರದ ಅಭಿಯಾನವು ಮುಂದುವರೆದಿದೆ. 

ಮೈಸೂರಿನ ಬನ್ನಿಮಂಟಪದ ಎಸ್.ಎಸ್. ನಗರದ ‘ಅಲ್-ಕಬೀರ್ ಶಾಲೆ’ಯಲ್ಲಿ ಶಿಬಿರವನ್ನು ಇಂದು ಆಯೋಜಿಸಲಾಗಿತ್ತು. ಸುಮಾರು ೧೫೦ಕ್ಕೂ ಹೆಚ್ಚು ಶಾಲಾ ಮಕ್ಕಳು, ಶಿಕ್ಷಕ ಶಿಕ್ಷಕಿಯರು ಹಾಗೂ ಶಾಲಾ ಸಿಬ್ಬಂದಿಗಳು ಶಿಬಿರದ ಉಪಯೋಗವನ್ನು ಪಡೆದರು.

ಆಸ್ಪತ್ರೆಯ ಮೇಲ್ವಿಚಾರಕರಾದ ವಿಜಯನ್ ಫ್ರಾನ್ಸಿಸ್‌ರವರು ಕಣ್ಣಿನ ಜಾಗೃತಿಯ ಬಗ್ಗೆ ವಿವರವಾಗಿ ಎಲ್ಲರಿಗೂ ತಿಳಿಸಿಕೊಟ್ಟರು. ‘ಒಲವು ಫೌಂಡೇಶನ್’ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಇ. ಕವನ್ರಾಗ್, ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಸಾಪ್ಟ್ ಸ್ಕಿಲ್ ತರಬೇತಿದಾರರಾದ ಸಯ್ಯದ್ ಅಫ್ತಾಬ್,……ಆಸ್ಪತ್ರೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ನಾಗೇಂದ್ರ, ಡಾ. ಶಿಲ್ಪಶ್ರೀ, ಫೌಂಡೇಶನ್ನಿನ ಮನೋಹರ್, ಶಾಲಾ ಮೇಲ್ವಿಚಾರಕರಾದ ಸೈದಾ ನಿದಾ, ಶಿಕ್ಷಕ ಶಿಕ್ಷಕಿ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು ಶಿಬಿರ ಉತ್ತಮವಾಗಿ ನೆರವೇರಲು ಸಹಕರಿಸಿದರು.


ಗುರುವಾರ, ಡಿಸೆಂಬರ್ 15, 2022

ಲಕ್ಷ್ಮಿಸಾಗರ ಸರ್ಕಾರಿ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಜಾಗೃತಿ ಶಿಬಿರ

 

ಪಾಂಡವಪುರ 13 ಡಿಸೆಂಬರ್, 2022 : ಒಲವು ಫೌಂಡೇಶನ್ (ರಿ) ಹಾಗೂ ಎವಿಜೆ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಲಕ್ಷ್ಮಿಸಾಗರ ಸರ್ಕಾರಿ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಜಾಗೃತ ಶಿಬಿರವನ್ನು ಆಯೋಜಿಸಲಾಗಿತ್ತು.. ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿಯವರು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಇದರ ಅನುಕೂಲತೆಯನ್ನು ಪಡೆದರು.



ಎನ್.ಆರ್. ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ರಾಬರ್ಟ್ ಕವನ್ರಾಗ್

 ಮೈಸೂರು ಎನ್.ಆರ್.ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳ್ಳಿಯಲು ಸಮಾಜ ಸೇವಕ, ಕಲಾವಿದ, ಪತ್ರಕರ್ತ, ಸಂಗೀತ ನಿರ್ದೇಶಕ ರಾಬರ್ಟ್ ಇಮ್ಮಾನ್ಯುಯೆಲ್ ಕವನ್ರಾಗ್ ನಿರ್ಧಾರ


ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಮಾಡಿದ ರಾಬರ್ಟ್ ರವರಿಗೆ ರಾಜಕೀಯ ಕ್ಷೇತ್ರದಲ್ಲೂ ಕೆಲಸ ಮಾಡಿದ ಅನುಭವವಿದೆ. ಹಲವಾರು ಸಂಘಸಂಸ್ಥೆಗಳನ್ನು ಹುಟ್ಟು ಹಾಕಿದ ಅನುಭವಗಳು ಇದೆ. 

ಸಂಗೀತ, ಸಾಹಿತ್ಯ, ಸೇವಾ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಮಾಡಿ ಯಾವುದೇ ಹಣ, ಅಧಿಕಾರಗಳ ಆಮಿಷಗಳಿಗೆ ಒಳಗಾಗದೆ


ಆಧ್ಯಾತ್ಮಿಕ, ಆತ್ಮೀಕ, ಮಾನಸಿಕ ಏಳಿಗೆಗೆ ತಮ್ಮದೇ ಶ್ರಮವನ್ನು ನೀಡಿದ್ದಾರೆ.

ಮಕ್ಕಳ, ಯುವಜನತೆಯ ಜ್ಞಾನಾಭಿವೃದ್ದಿಯೇ ಮುಂದಿನ ಸಾಮಾಜಿಕ ಏಳಿಗೆಗೆ ಸೂಕ್ತವಾದ ಬಲ ಎಂಬುದ್ದನ್ನು ಎಲ್ಲರ ಮನದಲ್ಲೂ ಸ್ಪಷ್ಟೀಕರಿಸುತ್ತಿದ್ದಾರೆ.

ಕೆಳವರ್ಗ, ನಿರ್ಗತಿಕ,‌ ಬಡವನಲ್ಲಿಯೂ ಕೂಡ ಸಾಮಾಜಿಕ ಕಳಕಳಿಯ ನಾಯಕತ್ವ ಇದೆ ಎಂಬುವುದು ಇವರ ನಂಬಿಕೆ.

ಬಡತನದಲ್ಲಿ ಹುಟ್ಟಿ ಬಡತನದಲ್ಲಿಯೇ ಬದುಕಿ ರಾಜ್ಯ, ದೇಶವನ್ನು ಆಳಿದ ಅನೇಕ ಮಹಾತ್ಮರನ್ನು ಆದರ್ಶವಾಗಿಟ್ಟುಕೊಂಡು ಜೀವಿಸುತ್ತಿದ್ದಾರೆ. ಅನೇಕ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿದ್ದರು ಸಾಮಾನ್ಯರಾಗಿದ್ದಾರೆ‌

2023 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಮಿಳಿಯಲು‌ ನಿರ್ಧರಿಸಿದ್ದಾರೆ.

"ನಾನು ಜನಸೇವಕ, ಮತದಾರರೇ ಯಜಮಾನರು...ಸಾಮಾಜ ಹಿತಚಿಂತನೆಯಲ್ಲಿ ಜನರಿಂದ ಆಯ್ಕೆಯಾದ ಎಲ್ಲರೂ, ಜನಸೇವೆಯಲ್ಲಿ ದುಡಿಯುತ್ತೇವೆ ಎಂದು ಬಂದ ಎಲ್ಲರ ಒಡಗೂಡಿ ಜನರ ಸೇವೆ ಮಾಡುವ ಮಹತಾಕಾಂಕ್ಷೆ ನನ್ನದು* ಎನ್ನುವ ಇವರ ಸಮತೆ, ಸೇವೆಯ ಗುಣಗಳು ಮುಂದಿನ ಚುನಾವಣೆಯಲ್ಲಿ ನಿರ್ಧರಿಸಲ್ಪಡುತ್ತದೆ.

ಬುಧವಾರ, ಡಿಸೆಂಬರ್ 14, 2022

ಮೈಸೂರಿನ ಪುಷ್ಟಗಿರಿಯ ‘ಬಾಲಯೇಸು ದೇವಾಲಯ’ ಧರ್ಮಕೇಂದ್ರ ಗಾಯನ ವೃಂದ ಪ್ರಥಮ ಸ್ಥಾನ




ಮೈಸೂರು 11 ಡಿಸೆಂಬರ್ 2022 : ಕಾರ್ಮೆಲ್ ಕ್ಯಾಥೋಲಿಕ್ ಅಸೋಸಿಯೇಷನ್‌ರವರು ಕ್ರಿಸ್ತಜಯಂತಿ ಪ್ರಯುಕ್ತ ಆಯೋಜಿಸಿದ್ದ 3೦ನೇ ವರ್ಷದ ‘ಕ್ಯಾರೊಲ್ ಗಾಯನ ಸ್ಪರ್ಧೆ' ಯಲ್ಲಿ ಮೈಸೂರಿನ ಪುಷ್ಪಗಿರಿಯ ‘ಬಾಲ ಯೇಸು ದೇವಾಲಯ’  ಧರ್ಮಕೇಂದ್ರದ ಗಾಯನ ವೃಂದ  ಪ್ರಥಮ ಬಹುಮಾನ ಗಳಿಸಿದ್ದಾರೆ. 


: Song video :


ಸೋಮವಾರ, ಡಿಸೆಂಬರ್ 12, 2022

'ಸಂತ ಜೋಸೆಫರ ಶಿಕ್ಷಣ ಸಂಸ್ಥೆ'ಗೆ ಚಾಂಪಿಯನ್‌ಶಿಪ್ ಟ್ರೋಫಿ



ಕಾರ್ಮೆಲ್ ಕ್ಯಾಥೋಲಿಕ್ ಅಸೋಸಿಯೇಷನ್ ಆಯೋಜಿಸಿದ್ದ 

‘ಕಾರ್ಮೆಲ್ ಕ್ಯಾರೊಲ್ ಗಾಯನ ಸ್ಪರ್ಧೆ – 2022’ ಯಲ್ಲಿ ಚಾಂಪಿಯನ್‌ಶಿಪ್ ಟ್ರೋಫಿ


ಮೈಸೂರು 11 ಡಿಸೆಂಬರ್ 2022 : ಕಾರ್ಮೆಲ್ ಕ್ಯಾಥೋಲಿಕ್ ಅಸೋಸಿಯೇಷನ್‌ರವರು ಕ್ರಿಸ್ತಜಯಂತಿಯ ಪ್ರಯುಕ್ತ ಆಯೋಜಿಸಿದ್ದ ೩೦ನೇ ವರ್ಷದ ‘ಕ್ಯಾರೊಲ್ ಗಾಯನ ಸ್ಪರ್ಧೆಯಲ್ಲಿ ಮೈಸೂರಿನ ಜಯಲಕ್ಷಿö್ಮಪುರಂನಲ್ಲಿರುವ ಸೆಂಟ್ ಜೋಸಪ್ಸ್ ಇನ್ಸ್ಟಿಟ್ಯೂಷನ್ಸ್ ಗೆ    ‘ಚಾಂಪಿಯನ್‌ಶಿಪ್ ಟ್ರೋಪಿ’ಯನ್ನು ಪಡೆದಿದ್ದಾರೆ. 

  • 1-4 ನೇ ತರಗತಿಯವರ ತಂಡಕ್ಕೆ ಎರಡನೆಯ ಸ್ಥಾನ 
  • 5-7 ನೇ ತರಗತಿಯವರ ತಂಡಕ್ಕೆ ಕನ್ನಡ ಗಾಯನದಲ್ಲಿ ಮೊದಲನೆಯ ಸ್ಥಾನ 
  • 5-7 ನೇ ತರಗತಿಯವರ ತಂಡಕ್ಕೆ ಇಂಗ್ಲೀಷ್ ಗಾಯನದಲ್ಲಿ  ಮೂರನೆಯ ಸ್ಥಾನ 
  • 8-9 ನೇ ತರಗತಿಯವರ ತಂಡಕ್ಕೆ ಕನ್ನಡ ಗಾಯನದಲ್ಲಿ ಮೊದಲನೆಯ ಸ್ಥಾನ
  • 8-10 ನೇ ತರಗತಿಯವರ ತಂಡಕ್ಕೆ ಇಂಗ್ಲೀಷ್ ಗಾಯನದಲ್ಲಿ ಎರಡನೆಯ ಸ್ಥಾನಗಳನ್ನು ಪಡೆದಿದ್ದಾರೆ.

ಸಂಸ್ಥೆಯ ಸಂಗೀತ ಶಿಕ್ಷಕರಾದ ಇಮ್ಮಾನ್ಯುಯೆಲ್ ಸ್ಯಾಂಸನ್, ರೋಷನ್, ಶಾಲಮ್ ಸಾಲೋಮನ್ ರವರ ತರಬೇತಿ ನೀಡಿರುತ್ತಾರೆ. ಎಲ್ಲಾ ತಂಡಗಳು ಉತ್ತಮವಾಗಿ ಹಾಡಿ ಎಲ್ಲರ ಪ್ರಶಂಸನೆಗೆ ಪಾತ್ರರಾಗಿದ್ದಾರೆ.




ಭಾನುವಾರ, ಡಿಸೆಂಬರ್ 11, 2022

'ಮೈಸೂರು ಪ್ರದೇಶ ಪರಿಷತ್' : ಕ್ರಿಸ್ತಜಯಂತಿ ಗಾಯನ ಸ್ಪರ್ಧೆ

ಮೈಸೂರು _10 _ಡಿಸೆಂಬರ್ 2022 : ದಕ್ಷಿಣ ಭಾರತ ಕ್ರೈಸ್ತ ಸಬೆ - ಕರ್ನಾಟಕ ದಕ್ಷಿಣ ಸಭಾ ಪ್ರಾಂತ್ಯದ 'ಮೈಸೂರು ಪ್ರದೇಶ ಪರಿಷತ್' ಆಯೋಜಿಸಿದ್ದ 'ಕ್ರಿಸ್ತ ಜಯಂತಿ ಗಾಯನ ಸ್ಪರ್ಧೆ' ಯು ಮೈಸೂರಿನ ವೆಸ್ಲಿ ಚರ್ಚ್ನ ಗಿಲ್ಡ್ ಹಾಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು. ವಿವಿಧ ಸ್ಥಳದ  ಸಭೆಗಳಿಂದ 'ಗಾಯನ ವೃಂದ'ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಕ್ರಿಸ್ತರ ಮಹಿಮಾ ಗೀತೆಗಳನ್ನು ಪ್ರಸ್ತುತ ಪಡಿಸಿದರು. ವಿಜೇತರಿಗೆ ನಗದು ಮತ್ತು ವಿನ್ನರ್ ಕಪ್ , ಹಾಗೂ ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಾಯಿತು.

ಮೈಸೂರು ಪ್ರದೇಶ ಪರಿಷತ್' ನ ಆಧ್ಯಕ್ಷರಾದ                  ರೆ. ಗುರುಶಾಂತರವರು ಸಂಪೂರ್ಣ ಜವಾಬ್ದಾರಿ ವಹಿಸಿದ್ದರು. ವೆಸ್ಲಿ ಮಹಾದೇವಾಲಯದ ಸಭಾಪಾಲಕರಾದ ರೆ. ಎಲೀಷ್ ಕುಮಾರ್ ರವರು ಎಲ್ಲಾ ವ್ಯವಸ್ಥೆಗಳಿಗೆ ಅಚ್ಚುಕಟ್ಟಾಗಿ ನೆರವೇರಲು ಸಹಕರಿಸಿದರು.

ಮೈ.ಪ್ರ.ಪ‌.ನ ಕಾರ್ಯದರ್ಶಿ ಜಾರ್ಜ್ ಮೋಹನ್ ಕುಮಾರ್, ಹಾಗೂ ಎಲ್ಲಾ ಕಾರ್ಯಕಾರಿ ಸಮಿತಿಯವರು ಹಾಗೂ ದೇವಾಲಯದ ಕಾರ್ಯದರ್ಶಿ ಈವನ್ ತೇಜ, ಸಂಧ್ಯಾ ಕಿರಣ್, ಡೆಬೋರ, ಸದಸ್ಯರು ಹಾಗೂ ವೆಸ್ಲಿ ಮಹಾದೇವಾಲಯದ ಯುವಕ ಯುವತಿಯರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು. 

 ಸಂಗೀತ ನಿರ್ದೇಶಕ ಟೋನಿ ರೋಸಾ಼ರಿಯೋ, ಸಂಗೀತ ನಿರ್ದೇಶಕ ಹಾಗೂ ಒಲವು ಫೌಂಡೇಶನ್' ನ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್, ಸಂತ ಜೋಸೆಫರ ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯರಾದ ಜೋಸೆಫ್ ಲಾರೆನ್ಸ್  ಗಾಯನ ಸ್ಪರ್ಧೆಯ ತೀರ್ಪುಗಾರರಾಗಿದ್ದರು.









ಶನಿವಾರ, ಡಿಸೆಂಬರ್ 10, 2022


ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ  ಪರಮಪೂಜ್ಯ ಡಾ. ಕೆ.ಎ.ವಿಲಿಯಂ ರವರನ್ನು ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು  ಸಿದ್ದರಾಗಿರುವ ರಾಬರ್ಟ್ ಇಮ್ಮಾನ್ಯುಯೆಲ್ ಕವನ್ರಾಗ್‌ರವರು  ಭೇಟಿ ಮಾಡಿ ಮಾತುಕತೆ ನಡೆಸಿ ಆಶೀರ್ವಾದವನ್ನು ಪಡೆದರು. ಈಗಾಗಲೇ ಕವನ್ರಾಗ್‌ರವರು ಪತ್ರಿಕಾಗೋಷ್ಟಿ ನಡೆಸಿ ತಾವು ಕಣಕ್ಕಿಳಿಯುವುದಾಗಿ ಘೋಷಿಸಿದ್ದರು. 

‘ಒಲವು ಪೌಂಡೇಶನ್’ ನ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಸಂಚಾಲಕರಾದ ವಿಲಿಯಂ ಪುಷ್ಪರಾಜ್ ಮತ್ತು ಸಿ.ಎಸ್.ಐ. ಸಭಾಪಾಲನ ಸಮಿತಿ ಸದಸ್ಯರಾದ ಅಭಿಲೇಕ್ ಕುಮಾರ್ ವಿ. ರವರು ಜೊತೆಯಲ್ಲಿದ್ದರು. 






ಶುಕ್ರವಾರ, ಡಿಸೆಂಬರ್ 9, 2022

ಮೈಸೂರಿನ ಶಿಕ್ಷಕರ್ಣಿ ಕೇಂದ್ರೀಯ ಶಾಲೆಯಲ್ಲಿ ಪುಟ್ಟ ಮಕ್ಕಳ 'ಫ್ಯಾನ್ಸಿ ಡ್ರೆಸ್' ಹಬ್ಬ





ಮೈಸೂರು ೦೯ ಡಿಸೆಂಬರ್, ೨೦೨೨ : ಮೈಸೂರಿನ ಹೆಬ್ಬಾಳದ ಶಿಕ್ಷಕರ್ಣಿ ಕೇಂದ್ರೀಯ ಶಾಲೆಯಲ್ಲಿ ಇಂದು ‘ಎಲ್.ಕೆ.ಜಿ., ಯುಕೆಜಿ’ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯು ಆಯೋಜಿಸಲಾಗಿತ್ತು. ಇದರು ಕೇವಲ ಸ್ಪರ್ಧೆಯಾಗಿದರೆ, ಮಕ್ಕಳು ಅಂದಚೆAದವಾಗಿ ವಿವಿಧ ಅಲಂಕಾರಿಕ ಉಡುಗೆ ತೊಡುಗೆಗಳೊಂದಿಗೆ ಸಮಾಜಕ್ಕೆ ಹಾಗೂ ವಿಶ್ವಕ್ಕೆ ಸಂದೇಶ ನೀಡಿದರು. ಮಹಾತ್ಮ ಗಾಂಧೀಜಿ, ಸೈನಿಕರು, ಪತ್ರಿಕೆಗಳ ಮೌಲ್ಯ, ಹಸಿರಿನ ಮಹತ್ವ, ನೀರಿನ, ನೆಲದ ಶ್ರೇಷ್ಟತೆ, ಹುಲಿ, ಚಿರತೆ, ಮೊಲ, ಚಿಟ್ಟೆಗಳಾಗಿ ಎಲ್ಲರನ್ನೂ ರಂಜಿಸಿದರು.

ಶಿಕ್ಷಕರ್ಣಿ ಶಾಲೆಯ ಪ್ರಾಂಶುಪಾಲರಾದ ವಿಲಿಯಂ ಪುಷ್ಪರಾಜ್‌ರವರು, ತೀರ್ಪುಗಾರರಾದ ಮೈಸೂರಿನ ಕೆ.ಎನ್.ಸಿ. ಶಾಲೆಯ ಸಹ ಶಿಕ್ಷಕಿಯಾದ ಅಮಿತಾ ವಿ., ‘ಒಲವು ಫೌಂಡೇಶನ್’ ನ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕಿ ಶಾಲಿನಿ ಜೇಮ್ಸ್ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಶಿಕ್ಷಕರು, ಶಿಕ್ಷಕೇತರರು, ಸಹಾಯಕ ಸಿಬ್ಬಂಧಿ ವರ್ಗದವರು, ಪೋಷಕರುಗಳಿಗೂ ಸೇರಿದಂತೆ ಮಕ್ಕಳ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಉತ್ತೇಜನ ನೀಡಿದರು. 


ಶನಿವಾರ, ಡಿಸೆಂಬರ್ 3, 2022

ಅಂತರಶಾಲಾ ಕೊಕೊ ಪಂದ್ಯಾವಳಿ

 ‘ಶಿಕ್ಷಕರ್ಣಿ ಕೇಂದ್ರೀಯ ಶಾಲೆ’ ಮತ್ತು ‘ಒಲವು ಫೌಂಡೇಶನ್ (ರಿ)’ ಸಹಯೋಗದಲ್ಲಿ

ಅಂತರಶಾಲಾ ಕೊಕೊ ಪಂದ್ಯಾವಳಿ



ಮೈಸೂರು ೦೩ ಡಿಸೆಂಬರ್, ೨೦೨೨ : ಮೈಸೂರು ನಗರದ ಹೆಬ್ಬಾಳದಲ್ಲಿರುವ ‘ಶಿಕ್ಷಕರ್ಣಿ ಕೇಂದ್ರೀಯ ಶಾಲೆ’ಯಲ್ಲಿ ಶಾಲಾಸಂಸ್ಥಾಪಕರಾದ ‘ದಿ. ವಿ. ವೆಂಕಟಗಿರಿಯವರ ಸ್ಮರಣಾರ್ಥ’  ಅಂತರಶಾಲಾ ಕೊಕೊ ಪಂದ್ಯಾವಳಿಯನ್ನು ‘ಒಲವು ಫೌಂಡೇಶನ್ (ರಿ)’ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ವಿವಿಧ ಶಾಲೆಗಳ ೨೦  ವಿದ್ಯಾರ್ಥಿ ವಿದ್ಯಾರ್ಥಿನಿಯರ ತಂಡಗಳು ಪಂದ್ಯದಲ್ಲಿ ಪಾಲುಗೊಂಡಿದ್ದರು. 

ಬೆಳಗ್ಗೆ ೯ ಗಂಟೆಗೆ ಪಂದ್ಯಾವಳಿ ಪಾರಿವಾಳಗಳನ್ನು ಹಾರಿಸುವುದರ ಮೂಲಕ ಚಾಲನೆ ನೀಡಿದರು. ಇದಕ್ಕು ಮುನ್ನ ದಿವಂಗತರ ಪೋಟೋಗೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿ ಸ್ಮರಿಸಲಾಯಿತು.

ವೇದಿಕೆಯಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ಲೋಕೇಶ್ ವಿ. ಖಜಾಂಚಿ ಆರ್. ಲಿಂಗರಾಜು, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಸೋಮಶೇಖರ್, ‘ಒಲವು ಫೌಂಡೇಶನ್’ನ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್, ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಹಿರಿಯ ದೈಹಿಕ ಶಿಕ್ಷಕರಾದ ವೇಣುಗೋಪಾಲ್, ಶಾಲೆಯ ಪ್ರಾಂಶುಪಾಲರಾದ ವಿಲಿಯಂ ಪುಷ್ಪರಾಜ್, ಉಪಪ್ರಾಂಶುಪಾಲರಾದ ಸರಿತಾ ಆರ್. ಶೆಟ್ಟಿ, ಮುಖ್ಯೋಪಾಧ್ಯಾಯರಾದ ಏ. ಎನ್. ನಂಜೇಗೌಡರು ಉಪಸ್ಥಿತರಿದ್ದರು. ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಹಾಜರಿದ್ದರು. ಶಿಕ್ಷಕರ್ಣಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂಧಿಗಳು ಕಾರ್ಯಕ್ರಮವನ್ನು ಅÀಚ್ಚುಕಟ್ಟಾಗಿ ನೆರವೇರಿಸಲು ಸಹಕರಿಸಿದರು.

ಮಂಗಳವಾರ, ನವೆಂಬರ್ 29, 2022

ಮೈಸೂರಿನ ಅಧ್ಯಯನ ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣಾ ಅಭ್ಯಯನ

 





ಒಲವು ಫೌಂಡೇಶನ್ ಮತ್ತು ಎ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ, ಮೈಸೂರಿನ ಅಧ್ಯಯನ ಶಾಲಾ ಮಕ್ಕಳಿಗೆ *ಉಚಿತ ಕಣ್ಣಿನ ತಪಾಸಣೆ ಮತ್ರು ಜಾಗೃತಿ ಶಿಬಿರ*  29.11.2022

‘ಒಲವು ಫೌಂಡೇಶನ್ (ರಿ)’ ಆಯೋಜಿಸಿ ಮೈಸೂರಿನ ‘ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ’ಯ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ‘ಕಣ್ಣಿನ ಬಗ್ಗೆ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ ವನ್ನು ನವೆಂಬರ್ ೨೯, ೨೦೨೨ ರಂದು ಮೈಸೂರಿನ ಶಕ್ತಿನಗರದ ಅಧ್ಯಯನ ಶಾಲೆಯಲ್ಲಿ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಫೌಂಡೇಶನ್ನಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪುಟ್ಟಸ್ವಾಮಿ, ಕಾರ್ಯದರ್ಶಿ ಶ್ರೀಮತಿ ಪಾರ್ವತಿ ದೇವಿ, ರಾಜ್ಯ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಸಂಚಾಲಕರಾದ ವಿಲಿಯಂ ಪುಷ್ಪರಾಜ್, ನಿರ್ದೇಶಕÀ ಮನೋಹರ್, ಮಾರ್ಕೆಟಿಂಗ್ ಮುಖ್ಯ ಕಾರ್ಯನಿರ್ವಾಹಕ ನಾಗೇಂದ್ರ, ನೇತ್ರ ತಜ್ಞ ಮುಜೀ಼ರ್ ಮುಂತಾದವರು ಉಪಸ್ಥಿತರಿದ್ದರು.

‘ದೃಷ್ಟಿ ದಿನ’ ಅಕ್ಟೋಬರ್ ೧೩ ರಂದು ಅಭಿಯಾನ ಆರಂಭಿಸಲಾಗಿದ್ದು, ಒಂದು ವರ್ಷದವರೆಗೆ ಶಿಬಿರವು ಮುಂದುವರೆಯಲಿದೆ. ಮೈಸೂರು ಜಿಲ್ಲೆಯ ವಿವಿಧ ಶಾಲಾಕಾಲೇಜುಗಳ ಮುಖ್ಯಸ್ಥರು ಈಗಾಗಲೇ ಶಿಬಿರಕ್ಕೆ ಸಮ್ಮತಿಸಿದ್ದಾರೆ. ಹೆಬ್ಬಾಳ ಶಿಕ್ಷಕರರ್ಣಿ ಕೇಂದ್ರೀಯ ಶಾಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮೈಸೂರಿನ ಶ್ರೀ ಭೈರವೇಶ್ವರ ಶಾಲೆ, ಶ್ರೀ ಜಯಲಕ್ಷಿö್ಮ ವಿಲಾಸ ಶಾಲೆ, ಅಕ್ಕನ ಬಳಗ ಶಾಲೆಗಳಲ್ಲಿ ಶಿಬಿರವನ್ನು ಆಯೋಜಿಲಾಗಿತ್ತು. ಈವರೆಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕರು, ಶಿಕ್ಷಕರೇತರು, ಪೋಷಕರುಗಳು ಸೇರಿದಂತೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಕಣ್ಣಿನ ತಪಾಸಣೆಯನ್ನು ಮಾಡಲಾಗಿದೆ.

ಸಾಂಸ್ಕೃತಿಕ ರಾಜಧಾನಿಯ ಕನ್ನಡ ಶಾಲೆಯಲ್ಲಿ ಉಚಿತ ಕಣ್ಷಿನ ತಪಾಸಣೆ



  

24.11.2022 ರಂದು ಒಲವು ಫೌಂಡೇಶನ್ (ರಿ) ಮತ್ತು ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಯ ಸಹಯೋಗದಲ್ಲಿ ನಡೆಸುತ್ತಿರುವ ಶಾಲಾ ಮಕ್ಕಳಿಗೆ *ಕಣ್ಣಿನ ಉಚಿತಾ ತಪಾಸಣಾ ಹಾಗೂ ಜಾಗೃತಿ ಅಭಿಯಾನ* ಮೈಸೂರಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಹಮ್ಮಿಕೊಳ್ಳಲಾಗಿತ್ತು. ಉಚಿತವಾಗ ಶಿಕ್ಷಣ ನೀಡುತ್ತಿರುವ ಆ ಶಾಲೆಗಳಲ್ಲಿ ಮುಖ್ಯೋಪಾಧ್ಯಾರಿಗೆ ಮಾತ್ರವೇ ಸರ್ಕಾರಿ ಸಂಬಳ. ಉಳಿದಂತ ಶಾಲಾ ವ್ಯವಸ್ಥಾಪಕರು ಮಕ್ಕಳಿಂದ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ಶಾಲಾ ಶಿಕ್ಷಕರು ಮುಖ್ಯೋಪಾಧ್ಯಾಯರು ಮಕ್ಕಳೊಂದಿಗೆ ಬಹು ಸ್ನೇಹದಿಂದ ಮನಃಪೂರ್ವಕವಾಗಿ ಹೊಂದಿಕೊಂಡು ಶಿಕ್ಷಣ ನೀಡುತ್ತಿದ್ದಾರೆ.



ಶನಿವಾರ, ನವೆಂಬರ್ 26, 2022

‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ : ‘ಒಲವು ಫೌಂಡೇಶನ್ (ರಿ)’

 ಮೈಸೂರಿನ ಹೆಬ್ಬಾಳದ ಶ್ರೀ ಭೈರವೇಶ್ವರ ಶಾಲೆಯಲ್ಲಿ

ಶಾಲಾ ಮಕ್ಕಳಿಗೆ ‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ ಅಭಿಯಾನ




‘ಒಲವು ಫೌಂಡೇಶನ್ (ರಿ)’ ಆಯೋಜಿಸಿದ ಮೈಸೂರಿನ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ‘ಕಣ್ಣಿನ ಬಗ್ಗೆ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರÀ’ದ ಅಭಿಯಾನ ಆರಂಭಿಸಲಾಗಿದೆ. ಒಂದು ವರ್ಷದವರೆಗೆ ಶಿಬಿರವು ಮುಂದುವರೆಯಲ್ಲಿದ್ದು, ಮೈಸೂರು ಜಿಲ್ಲೆಯ ವಿವಿಧ ಶಾಲಾಕಾಲೇಜುಗಳ ಮುಖ್ಯಸ್ಥರು ಈಗಾಗಲೇ ಶಿಬಿರಕ್ಕೆ ಸಮ್ಮತಿಸಿದ್ದಾರೆ. ಹೆಬ್ಬಾಳ ಶಿಕ್ಷಕರರ್ಣಿ ಕೇಂದ್ರೀಯ ಶಾಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಸುಮಾರು ೮೦೦ ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಹಾಗೂ ಶಿಕ್ಷಕ, ಶಿಕ್ಷಕಿಯರು ಮತ್ತು ಶಾಲಾ ಸಿಬ್ಬಂಧಿ ವರ್ಗದವರಿಗೆ ತಪಾಸಣೆ ನಡೆಸಲಾಗಿದೆ. ಮುಂದುವರೆದು ಮೈಸೂರಿನ ಹೆಬ್ಬಾಳದ ಶ್ರೀ ಭೈರವೇಶ್ವರ ಶಾಲೆಯಲ್ಲಿ ಶಿಬಿರವನ್ನು ಆಯೋಜಿಲಾಗಿತ್ತು. ಸುಮಾರು ೬೦೦ ಕಣ್ಣಿನ ತಪಾಸಣೆ ಮಾಡಲಾಗಿದೆ. 

ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್ ಮಾತಾಡುತ್ತಾ, ‘ಕೊರೊನಾದ ಪರಿಣಾಮವಾಗಿ ಎಲ್ಲಾ ಶಾಲಾಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳನ್ನು ಆರಂಭಿಸಿದ ಪರಿಣಾಮವಾಗಿ, ಸಾಕಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಅಲ್ಲದೆ ಶಿಕ್ಷಕರುಗಳು ಕಣ್ಣಿನ ತೊಂದರೆಗೆ ಸಿಲುಕಿದ್ದಾರೆ. ಕಣ್ಣು ಎಲ್ಲರಿಗೂ ಅತ್ಯಮೂಲ್ಯವಾದದ್ದು. ಆದ್ದರಿಂದ ‘ಒಲವು ಫೌಂಡೇಶನ್’ ನ್ನ ನೇತೃತ್ವದಲ್ಲಿ ಕಣ್ಣಿನ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಆರಂಭಿಸಲಾಗಿದೆ.’ ಎಂದು ತಿಳಿಸಿದರು. ಎಎಸ್‌ಜಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಪವನ್ ವಿ. ಜೋಷಿಯವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅಸ್ಪತ್ರೆಯ ವ್ಯವಸ್ಥಾಪಕರಾದ ವಿಜಯ್ ಫ್ರಾನ್ಸಿಸ್, ಉಸ್ತುವಾರಿ ನಾಗೇಂದ್ರರವರು ಹಾಗೂ ಫೌಂಡೇಶನ್ನಿನ ಸಂಚಾಲಕರಾದ ವಿಲಿಯಂರವರು ಕಣ್ಣಿನ ರಕ್ಷಣೆಯ ಬಗ್ಗೆ ಮಾಹಿತಿಗಳನ್ನು ನೀಡಿ ಎಲ್ಲರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ. ನೇತ್ರ ತಜ್ಞರಾದ ಡಾ. ಶಿಲ್ಪಶ್ರೀರವರು ತಪಾಸಣೆಯನ್ನು ನಡೆಸುತ್ತಿದ್ದಾರೆ. 

ಫೌಂಡೇಶನ್ನಿನ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ರಾಜ್ಯ ಕಾರ್ಯಾಧ್ಯಕ್ಷರಾದ ಮಂಜುಳಾ ಆರ್. ಗೌಡ, ನಿರ್ದೇಶಕರುಗಳಾದ ಮನೋಹರ್, ಪ್ರೇಮ, ಸಚ್ಚಿನ್ ಜೈನ್, ಎ.ಎಂ.ಬಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ ಎಸ್., ಶಾಲಾ ಆಡಳಿತಾಧಿಕಾರಿಗಳಾದ ಪಂಚಾಕ್ಷರಿ ಬಿ.ಆರ್., ಮುಖ್ಯೋಪಾಧ್ಯಾಯರಾದ ಕಾಮಾಕ್ಷಿ, ಆಸ್ಪತ್ರೆಯ ನನ್ಬನ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.





ಗುರುವಾರ, ನವೆಂಬರ್ 17, 2022

‘ಒಲವು ಫೌಂಡೇಶನ್ (ರಿ)’ ವತಿಯಿಂದ ಶಾಲಾ ಮಕ್ಕಳಿಗೆ ‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ ಅಭಿಯಾನ

‘ಒಲವು ಫೌಂಡೇಶನ್ (ರಿ)’ ಆಯೋಜಿಸಿದ ಮೈಸೂರಿನ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ‘ಕಣ್ಣಿನ ಬಗ್ಗೆ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ದ ಅಭಿಯಾನ ಆರಂಭಿಸಲಾಗಿದೆ. ಒಂದು ವರ್ಷದವರೆಗೆ ಶಿಬಿರವು ಮುಂದುವರೆಯಲ್ಲಿದ್ದು, ಮೈಸೂರು ಜಿಲ್ಲೆಯ ವಿವಿಧ ಶಾಲಾಕಾಲೇಜುಗಳ ಮುಖ್ಯಸ್ಥರು ಈಗಾಗಲೇ ಶಿಬಿರಕ್ಕೆ ಸಮ್ಮತಿಸಿದ್ದಾರೆ. ಹೆಬ್ಬಾಳ ಶಿಕ್ಷಕರರ್ಣಿ ಕೇಂದ್ರೀಯ ಶಾಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಸುಮಾರು ೮೦೦ ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಹಾಗೂ ಶಿಕ್ಷಕ, ಶಿಕ್ಷಕಿಯರು ಮತ್ತು ಶಾಲಾ ಸಿಬ್ಬಂಧಿ ವರ್ಗದವರಿಗೆ ತಪಾಸಣೆ ನಡೆಸಲಾಗಿದೆ. ಮುಂದುವರೆದು ಮೈಸೂರಿನ ಹೆಬ್ಬಾಳದ ಶ್ರೀ ಭೈರವೇಶ್ವರ ಶಾಲೆಯಲ್ಲಿ ಶಿಬಿರವನ್ನು ಆಯೋಜಿಲಾಗಿತ್ತು. ಸುಮಾರು ೬೦೦ ಕಣ್ಣಿನ ತಪಾಸಣೆ ಮಾಡಲಾಗಿದೆ. 









ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್ ಮಾತಾಡುತ್ತಾ, 

‘ಕೊರೊನಾದ ಪರಿಣಾಮವಾಗಿ ಎಲ್ಲಾ ಶಾಲಾಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳನ್ನು ಆರಂಭಿಸಿದ ಪರಿಣಾಮವಾಗಿ, ಸಾಕಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಅಲ್ಲದೆ ಶಿಕ್ಷಕರುಗಳು ಕಣ್ಣಿನ ತೊಂದರೆಗೆ ಸಿಲುಕಿದ್ದಾರೆ. ಕಣ್ಣು ಎಲ್ಲರಿಗೂ ಅತ್ಯಮೂಲ್ಯವಾದದ್ದು. ಆದ್ದರಿಂದ ‘ಒಲವು ಫೌಂಡೇಶನ್’ ನ್ನ ನೇತೃತ್ವದಲ್ಲಿ ಕಣ್ಣಿನ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಆರಂಭಿಸಲಾಗಿದೆ.’ ಎಂದು ತಿಳಿಸಿದರು.

ಎಎಸ್‌ಜಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಪವನ್ ವಿ. ಜೋಷಿಯವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅಸ್ಪತ್ರೆಯ ವ್ಯವಸ್ಥಾಪಕರಾದ ವಿಜಯ್ ಫ್ರಾನ್ಸಿಸ್, ಉಸ್ತುವಾರಿ ನಾಗೇಂದ್ರರವರು ಹಾಗೂ ಫೌಂಡೇಶನ್ನಿನ ಸಂಚಾಲಕರಾದ ವಿಲಿಯಂರವರು ಕಣ್ಣಿನ ರಕ್ಷಣೆಯ ಬಗ್ಗೆ ಮಾಹಿತಿಗಳನ್ನು ನೀಡಿ ಎಲ್ಲರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ. ನೇತ್ರ ತಜ್ಞರಾದ ಡಾ. ಶಿಲ್ಪಶ್ರೀರವರು ತಪಾಸಣೆಯನ್ನು ನಡೆಸುತ್ತಿದ್ದಾರೆ. 

ಫೌಂಡೇಶನ್ನಿನ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ರಾಜ್ಯ ಕಾರ್ಯಾಧ್ಯಕ್ಷರಾದ ಮಂಜುಳಾ ಆರ್. ಗೌಡ, ನಿರ್ದೇಶಕರುಗಳಾದ ಮನೋಹರ್, ಪ್ರೇಮ, ಸಚ್ಚಿನ್ ಜೈನ್, ಎ.ಎಂ.ಬಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ ಎಸ್., ಶಾಲಾ ಆಡಳಿತಾಧಿಕಾರಿಗಳಾದ ಪಂಚಾಕ್ಷರಿ ಬಿ.ಆರ್., ಮುಖ್ಯೋಪಾಧ್ಯಾಯರಾದ ಕಾಮಾಕ್ಷಿ, 

ಆಸ್ಪತ್ರೆಯ ನನ್ಬನ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...