ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಕೆ.ಎ.ವಿಲಿಯಂ ರವರನ್ನು ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದರಾಗಿರುವ ರಾಬರ್ಟ್ ಇಮ್ಮಾನ್ಯುಯೆಲ್ ಕವನ್ರಾಗ್ರವರು ಭೇಟಿ ಮಾಡಿ ಮಾತುಕತೆ ನಡೆಸಿ ಆಶೀರ್ವಾದವನ್ನು ಪಡೆದರು. ಈಗಾಗಲೇ ಕವನ್ರಾಗ್ರವರು ಪತ್ರಿಕಾಗೋಷ್ಟಿ ನಡೆಸಿ ತಾವು ಕಣಕ್ಕಿಳಿಯುವುದಾಗಿ ಘೋಷಿಸಿದ್ದರು.
‘ಒಲವು ಪೌಂಡೇಶನ್’ ನ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಸಂಚಾಲಕರಾದ ವಿಲಿಯಂ ಪುಷ್ಪರಾಜ್ ಮತ್ತು ಸಿ.ಎಸ್.ಐ. ಸಭಾಪಾಲನ ಸಮಿತಿ ಸದಸ್ಯರಾದ ಅಭಿಲೇಕ್ ಕುಮಾರ್ ವಿ. ರವರು ಜೊತೆಯಲ್ಲಿದ್ದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ