ಮಂಗಳವಾರ, ಜನವರಿ 31, 2023

ವಿಶ್ವ ಶಾಂತಿ ದಿನಾಚರಣೆ



 ಮೈಸೂರಿನ ಸಂತ ಜೋಸೆಫರ ಪ್ರಧಾನಾಲಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ  ಕ್ರೈಸ್ತ ಪೀಠದ ಸಹಯೋಗದಲ್ಲಿ  

ಸಂತ ಫಿಲೋಮಿನಾ ಪುಣ್ಯಕ್ಷೇತ್ರ ಆವರಣದಲ್ಲಿ 

ವಿಶ್ವ ಶಾಂತಿ ದಿನಾಚರಣೆ



ಮೈಸೂರು ಜನವರಿ ೩೦, ೨೦೨೩ : ವಿಶ್ವದಲ್ಲಿ ಶಾಂತಿ, ಪ್ರೀತಿ, ಐಕ್ಯತೆಯನ್ನು ನೆಲಸುವಂತೆ  ಶಾಂತಿ ದಿನಾಚರಣೆಯನ್ನು ಸರ್ವ ಧರ್ಮಗಳ ಸಂದೇಶದ ಮೂಲಕ ಆಚರಿಸಲಾಯಿತು.

ವಿಶ್ರಾಂತ ಮಹಾಧರ್ಮಾಧ್ಯಕ್ಷರು ಹಾಗೂ ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳಾದ ಪರಮ ಪೂಜ್ಯ ಡಾ. ಬೆರ್ನಾಡ್ ಮೊರಾಸ್‌ರವರು ಅಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ,      ಡಾ. ಕೆ. ಜಾವೀದ್ ನಯಿಮ್, ಮೈಸೂರು ಧರ್ಮಕ್ಷೇತ್ರದ ಎಪಿಸ್ಕೋಪಲ್ ಶ್ರೇಷ್ಠಗುರುಗಳಾದ ಅತಿ ವಂ. ಡಾಮಿನಿಕ್ ವಾಸ್ ಓಸಿಡಿಯವರು ಆಗಮಿಸಿದ್ದರು.


ಗೌರವಾನ್ವಿತ  ಅತಿಥಿಗಳಾಗಿ ಮೈಸೂರು ಧರ್ಮಕ್ಷೇತ್ರದ ಶ್ರೇಷ್ಟಗುರು ಅತಿ ವಂ. ಆಲ್ಪ್ರೆಡ್  ಜಾನ್ ಮೆಂಡೊನ್ಸಾ, ಮೈಸೂರು ವಿಶ್ವವಿದ್ಯಾಲಯದ ಕ್ರೈಸ್ತ ಧರ್ಮ ವಿಭಾಗದ ಅಧ್ಯಕ್ಷರಾದ ವಂ. ಡಾ. ವ್ಯಾಲಿಂಟಿನ್ ರಾಜೇಂದ್ರ ಕುಮಾರ್, ಮೈಸೂರು ವಿಶ್ವವಿದ್ಯಾಲಯದ ಕ್ರೈಸ್ತ ಧರ್ಮ ವಿಭಾಗದ ಪ್ರೊಪೆಸರ್ ಡಾ. ಜಾನ್ ಪೀಟರ್ ಲಾಜರ್ ಉಪಸ್ಥಿತರಿದ್ದರು.

ಸಂತ ಜೋಸೆಫರ ಪ್ರಧಾನಾಲಯದ ಧರ್ಮಗುರುಗಳಾದ ವಂ. ಗುರು ಸ್ಟ್ಯಾನಿ ಡಿ’ಆಲ್ಮೇಡಾ ರವರು ಎಲ್ಲರನ್ನೂ ಸ್ವಾಗತಿಸಿದರು. ಗಣ್ಯರು ದೀಪ ಬೆಳಗುವುದರೊಂದಿಗೆ ಮತ್ತು ಶಾಂತಿಯ ಸಂದೇಶವಾಗಿ ಪಾರಿವಾಳ ಹಾರಿಬಿಡುವುದರೊಂದಿಗೆ ಶಾಂತಿಯ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಶ್ರೀ ಚಿದಾನಂದ ಸ್ವಾಮೀಜಿ, ಶ್ರೀ ಜಾವೀದ್ ನಯಿಮ್ ಹಾಗೂ ಅತೀ ವಂ. ಡಾಮಿನಿಕ್ ವಾಸ್‌ರವರು ಶಾಂತಿಯ ಕುರಿತು ತಮ್ಮ ಮನದಾಳದ ಸಂದೇಶವನ್ನು ಸಾರಿದರು.




ಸಂತ ಆನ್ಸ್ ಪ್ರೌಢಶಾಲೆ, ಪ್ರಬೋಧನಾ ಪಲೊಟೈನ್ ಬ್ರದರ್ಸ್, ಸಂತ ಮೇರಿಸ್ ಪ್ರೌಢಶಾಲೆ,  ಶ್ರೀ ಕ್ರಿಸ್ಟಿ ಮತ್ತು ಶ್ರೀ ಟೋನಿ ತಂಡದವರು ಶಾಂತಿ ಸಂದೇಶವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟರು. 





ಕ್ರೈಸ್ತ ಧರ್ಮ ವಿಭಾಗದವರು ವಂದನಾರ್ಪಣೆಯನ್ನು ಮಾಡಿದರು.

ಶನಿವಾರ, ಜನವರಿ 28, 2023

'ಸೆಂಟ್ ರ‍್ನಾಲ್ಡ್ ಕೇಂದ್ರೀಯ ವಿದ್ಯಾಲಯ' ದಲ್ಲಿ 'ಉಚಿತ ಕಣ್ಣಿನ ತಪಾಸಣೆ ಹಾಗೂ ಜಾಗೃತಿ ಶಿಬಿರ'

    'ಒಲವು ಫೌಂಡೇಶನ್' ಹಾಗೂ ಮೈಸೂರಿನ 'ಏ.ಎಸ್.ಜಿ. ಕಣ್ಣಿನ ಆಸ್ಪತ್ರೆ' ಯ                        ಸಹಯೋಗದಲ್ಲಿ 'ಸೆಂಟ್ ರ‍್ನಾಲ್ಡ್ ಕೇಂದ್ರೀಯ ವಿದ್ಯಾಲಯ' ದಲ್ಲಿ                  'ಉಚಿತ ಕಣ್ಣಿನ ತಪಾಸಣೆ ಹಾಗೂ ಜಾಗೃತಿ ಶಿಬಿರ'


2023 ಜನವರಿ 23 ಮತ್ತು 24 ರಂದು ನಡೆದ ಎರಡು ದಿನಗಳ ಈ ಅಭಿಯಾನದ ಶಿಬಿರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಸೇರಿದಂತೆ ಸುಮಾರು 1,300 ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಕೊಂಡರು.




ಬೆಳಗ್ಗಿನ ಶಾಲಾ ಪ್ರಾರ್ಥನಾ ಸಮಯದಲ್ಲಿ ಆಸ್ಪತ್ರೆಯ ಕೇಂದ್ರೀಯ ವ್ಯವಸ್ಥಾಪಕರಾದ ವಿಜಯನ್ ಫ್ರಾನ್ಸಿಸ್,  ಒಲವು ಫೌಂಡೇಶನ್ ನ್ನಿನ ಸಂಸ್ಥಾಪಕ ರಾಜ್ಯಾದ್ಯಕ್ಷರಾದ          ರಾಬರ್ಟ್  ಕವನ್ರಾಗ್, ಆಸ್ಪತ್ರೆಯ ಉಸ್ತುವಾರಿಗಳಾದ ನಾಗೇಂದ್ರ, ಫೌಂಡೇಶನ್ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ನೇತ್ರ ತಜ್ಞರಾದ ಡಾ. ಶಿಲ್ಪಶ್ರೀ, ಡಾ. ಗಿರೀಶ್ ,ಮಧುರವರು, ಫೌಂಡೇಶನ್ನಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಜಯನ್ ರವರು ಸವಿವರವಾಗಿ ಎಲ್ಲರಿಗೂ ಕಣ್ಷಿನ ಜಾಗೃತಿಯ ಬಗ್ಗೆ ಅರಿವು ಮೂಡಿಸಿದರು. 

ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಫಾದರ್ ಸುನಿಲ್ ಮೆನೆಜೆಸ್ ರವರು ವಿದ್ಯಾರ್ಥಿಗಳಲ್ಲಿ ಶಿಬಿರದ ಮಹತ್ವವನ್ನು ತಿಳಿಕೊಟ್ಟು  ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ವಿದ್ಯಾಸಂಸ್ಥೆಯ ಮುಖ್ಯ ವ್ಯವಸ್ಥಾಪಕರಾದ ಫಾದರ್ ಲಾರೆನ್ಸ್ ಕೊರೇ, ನಿರ್ವಾಹಕರಾದ ಫಾದರ್ ಸಾಲೋಮನ್ ರೆಡ್ಡಿರವರು ಸಲಹೆ ಸೂಚನೆಗಳನ್ನು ನೀಡಿದರು. ಸಂಸ್ಥೆಯ




ಸಂಸ್ಥೆಯ ಶಿಕ್ಷಕರುಗಳು, ಶಾಲಾ ಸಿಬ್ಬಂದಿ ರ‍್ಗದವರು ಶಿಬಿರವು ಉತ್ತಮವಾಗಿ ನೆರವೇರಲು ಸಹಕರಿಸಿದರು.

ಶನಿವಾರ, ಜನವರಿ 7, 2023

ಮೈಸೂರು ಕಥೋಲಿಕ ಧರ್ಮಕ್ಷೇತ್ರಕ್ಕೆ ಆಡಳಿತಾಧಿಕಾರಿಗಳ ನೇಮಕ

 ✝️ಮೈಸೂರು ಧರ್ಮಪ್ರಾಂತ್ಯದ  ಆಡಳಿತ ಅಧಿಕಾರಿಯಾಗಿ ಬೆಂಗಳೂರಿನ ನಿವೃತ ಮಹಾ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಬರ್ನಾಡ್ ಬ್ಲೇಸಿಯಸ್ ಮೊರಾಸ್ 

ಜನವರಿ 07, 2023 ರಂದು  ಮೈಸೂರಿನ ಧರ್ಮಾಧ್ಯಕ್ಷರಾದ ಪೂಜ್ಯ ಡಾ.  ಕೆ ಎ ವಿಲಿಯಂ ಅವರನ್ನು ವೈದ್ಯಕೀಯ ರಜೆಗೆ ಕಳುಹಿಸುವ ಆದೇಶವನ್ನು ಹೊರಡಿಸಿತು ಮತ್ತು ಬೆಂಗಳೂರಿನ ಆರ್ಚ್‌ ಡಯಾಸಿಸ್‌ನ ಮಹಾಧರ್ಮಾಧ್ಯಕ್ಷರು  ನಿವೃತ್ತ ಮಹಾಧರ್ಮಾಧ್ಯಕ್ಷರಾದ ಡಾ. ಬರ್ನಾಡ್ ಮೊರಾಸ್ ಅವರನ್ನು ಮೈಸೂರು ಡಯಾಸಿಸ್‌ನ ಅಪೋಸ್ಟೋಲಿಕ್ ಅಡ್ಮಿನಿಸ್ಟ್ರೇಟರ್ ಆಗಿ ನೇಮಿಸಿತು.

ಜನವರಿ 07, 2023 ರಂದು ಸಂಜೆ ಸಂತ ಜೋಸೆಫರ ಪ್ರಧಾನಾಲಯದಲ್ಲಿ ವಿಶೇಷ ಬಲಿಪೂಜೆ ನೆರವೇರಿತು. ನೇಮಕ ಪತ್ರವನ್ನು ಓದಲಾಯಿತು. ಮೈಸೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರಾದ ಪೂಜ್ಯ ಡಾ. ಅಂತೋನಿ ವಾಜ಼ಪಿಳ್ಳಿ, ಧರ್ಮಗುರುಗಳು, ಕನ್ಯಾಸ್ತ್ರೀಯರು, ಭಕ್ತಜನರು ಭಾಗವಹಿಸಿದ್ದರು.





*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...