ಮಂಗಳವಾರ, ಜುಲೈ 18, 2023

ಕನ್ನಡ ಕಸ್ತೂರಿ 2023 ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ

'ಕನ್ನಡ ಕಸ್ತೂರಿ 2023' 

ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ

'ಒಲವು ಫೌಂಡೇಶನ್ (ರಿ)' ವತಿಯಿಂದ ಕನ್ನಡ ಕಸ್ತೂರಿ 2023 ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 16.07.2023 ರಂದು ಮೈಸೂರಿನ 'ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣ' ದಲ್ಲಿ ಹಮ್ಮಿಕೊಳ್ಳಲಾಗಿತ್ತು. 

'ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ' ಯ ಸಹಯೋಗದಲ್ಲಿ ನೆರವೇರಿದ ಸಮಾರಂಭದಲ್ಲಿ 2023 ಸಾಲಿನ ಹತ್ತನೇ ತರಗತಿಯ ಕನ್ನಡ ವಿಷಯದಲ್ಲಿ ಸಂಪೂರ್ಣ ಅಂಕಗಳನ್ನು ಗಳಿಸಿದ ನೂರಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 'ಕನ್ನಡ ಕಸ್ತೂರಿ 2023' ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

'ಕವನ್ರಾಗ್ ಗಾಯನ ಸಂಗಮ'ದವರು ಸುಗಮ ಸಂಗೀತದ ಮೂಲಕ ನಾಡಪ್ರೇಮ ಗೀತೆ ಹಾಗೂ ಭಾವಗೀತೆಗಳನ್ನು ಸುಮಧುರವಾಗಿ ಹಾಡಿ ರಂಜಿಸಿದರು. 

ಅಶ್ವಿನಿ ಎನ್. ರವರು ಮಧುರವಾಗಿ ವೀಣೆಯಿಂದ ಗೀತೆಗಳನ್ನು ಪ್ರಸ್ತುತಪಡಿಸಿದರು. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದ ಧನುಷ್ ಎಂ. ಹಾಗೂ ಜಿನುತ ಬಿ.ಪಿ. ರವರು ಹಾಡಿದ ಭಾವಗೀತೆಗಳು ನೆರೆದವರನ್ನು ಮಂತ್ರಮುಗ್ದರನ್ನಾಗಿಸಿತು. ನಂತರದಲ್ಲಿ

ನೆರೆದವರ ಸಮ್ಮುಖದಲ್ಲಿ ಕನ್ನಡ ಧ್ವಜವನ್ನು ಹಾರಿಸುವುದರೊಂದಿಗೆ ಶ್ರೀ ಶಿವಯೋಗಿಶ್ವರ ಮಠದ         ಶ್ರೀ ಶ್ರೀ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿರವರು ಚಾಲನೆ ನೀಡಿದರು. ಒಕ್ಕೊರಲಿನಿಂದ ಎಲ್ಲರೂ ಕನ್ನಡ ಮಾತೆಗೆ ಜಯಕಾರ ಘೋಷಿಸುತ್ತಾ 'ಜಯ ಭಾರತ ಜನನಿಯ ತನುಜಾತೆ' ನಾಡಗೀತೆಯನ್ನು ಹಾಡಿದರು.

ಧನುಷ್ ಎಂ. ರವರು ಪ್ರಾರ್ಥನಾಗೀತೆಯೊಂದಿಗೆ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು. 

ಅಶ್ವಿನಿ ಎನ್. ರವರು ಸ್ವಾಗತ ಕೋರಿದರು. ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್ ರವರು ಪ್ರಸ್ತಾವಿಕ ನುಡಿಗಳನ್ನಾಡಿದರು.

ಸಮಾರಂಭದ ಉದ್ಘಾಟನೆಯನ್ನು ಶ್ರೀಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿಗಳು, ಶ್ರೀ ಶ್ರೀ ಬಸವಾನಂದ ಸ್ವಾಮಿ, 'ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ' ರಾದ ಮಡ್ಡೀಕೆರೆ ಗೋಪಾಲ್,  'ಚಲನಚಿತ್ರ ಸಂಗೀತ ನಿರ್ದೇಶಕರು ಹಾಗೂ ಧ್ವನಿತಂತ್ರಜ್ಣ' ರಾದ ಪಳನಿ ಡಿ. ಸೇನಾಪತಿ, 'ಚಲನಚಿತ್ರ ನಿರ್ಮಾಪಕರು ಮತ್ತು ಮೈಸೂರು ಪ್ರೆಸ್ ಕ್ಲಬ್ ನ ಅಧ್ಯಕ್ಷ' ರಾದ ಲಯನ್ ಡಾ. ಎಸ್. ವೆಂಕಟೇಶ್, ಫೌಂಡೇಶನ್ನಿನ್ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್ ನೆರವೇರಿಸಿಕೊಟ್ಟರು.

ಶ್ರೀ ಶ್ರೀ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿಗಳು ಮಾತಾಡುತ್ತಾ ಕನ್ನಡ ಸಂಸ್ಕೃತಿ ಹಾಗು ಮಾನವೀಯತೆಯ ಬದುಕಿನ ಮಕ್ಕಳಿಗೆ ಮನದಟ್ಟಾಗುವಂತೆ ಬೋಧಿಸಿದರು.

ಡಾ. ಎಸ್ ವೆಂಕಟೇಶ್ ರವರು ಕನ್ನಡ ಹಾಗೂ ವಿದ್ಯಾರ್ಥಿಗಳ ಪ್ರಸ್ತುತ ಸಾಮಾಜಿಕ ಚಿಂತನೆಗಳನ್ನು ತಿಳಿಸಿಕೊಡುತ್ತಾ ಸಾಹಿತ್ಯ ಸಂಗೀತದ ಬಗ್ಗೆ ಕಿವಿ ಮಾತುಗಳನ್ನು ಹೇಳಿದರು.

ಪಳನಿ ಸೇನಾಪತಿಯವರು ಕನ್ನಡ ನಾಡು ನುಡಿಗಳ ಬಗ್ಗೆ ನೆರೆದವರಲ್ಲಿ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು.

'ಕಲಾಧರೆ ಕಲ್ಚರಲ್ ಟ್ರಸ್ಟ್' ನ ಅಧ್ಯಕ್ಷರು ಹಾಗೂ ಪ್ರಖ್ಯಾತ ನೃತ್ಯ ನಿರ್ದೇಶಕರಾದ ಚಾಮರಾಜ್ ರವರು ವೇದಿಕೆಯಲ್ಲಿದ್ದರು.

*ನಾವೂ ಹಾಡುತ್ತೇವೆ* ಗಾಯನ ಸಂಗಮದ ಉದ್ಘಾಟನೆಯನ್ನು ಡಾ. ಲಯನ್ ವೆಂಕಟೇಶ್ ಹಾಗೂ ಪಳನಿ ಸೇನಾಪತಿಯವರು ನಡೆಸಿಕೊಟ್ಟರು.

'ಕನ್ನಡ ಕಸ್ತೂರಿ 2023' ರಾಜ್ಯ ಪ್ರಶಸ್ತಿಯನ್ನು ಕನ್ನಡದ ಶಲ್ಯ ಹೊದಿಸುವುದರ ಮೂಲಕ ಸಂಪೂರ್ಣ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೀಡಿ ಸನ್ಮಾನಿಸಲಾಯಿತು.

ಸಂಪೂರ್ಣ ಸಮಾರಂಭದ ಜವಬ್ದಾರಿಯನ್ನು ಮತ್ತು ಸಮಾರಂಭವು ಉತ್ತಮವಾಗಿ ನಡೆಯಲು ರಾಬರ್ಟ್ ಕವನ್ರಾಗ್ ಹಾಗೂ ತಂಡದವರು ಶ್ರಮಿಸಿದ್ದನ್ನು ಗಣ್ಯರು ಹಾಗೂ ಆಗಮಿಸಿದ್ದ ಎಲ್ಲರೂ ಪ್ರಶಂಸಿದರು.


ಮೆಲ್ವಿನ್ ಜ್ಞಾನಸುಂದರ್, ಅಕ್ಮಲ್ ಪಾಷ, ಮಂಜುಳ ರುದ್ರೆ ಗೌಡ, ಕಸ್ತೂರಿ, ಮನೋಹರ್, ಮಾದೇಶ, ಆಲ್ಫ್ರಡ್ ವಿವೇಕ್... ಮತ್ತಿತ್ತರು ಸಮಾರಂಭವನ್ನು ಹಚ್ಚುಕಟ್ಟಾಗಿ ನಿರ್ವಹಿಸಲು ಸಹಕರಿಸಿದರು. 

ಸುಗಮ ಸಂಗೀತದಲ್ಲಿ ನಿತಿನ್ ಲಾರೆನ್ಸ್ ರವರು ಕೀಬೋರ್ಡ್, ಮಹದೇವು ತಬಲ, ಆಶ್ವಿನಿ ಎನ್. ವೀಣೆ ಹಾಗೂ ರೆಯಾನ್ ಕೀಬೋರ್ಡ್ ಮೂಲಕ ನಡೆಸಿಕೊಟ್ಟರು.

ಮಮತಾರವರು ಸಂಪೂರ್ಣ ಕಾರ್ಯಕ್ರಮ ನಿರೂಪಣೆಯ ಹೊಣೆಹೊತ್ತು ಕಾರ್ಯಕ್ರಮವು ಉತ್ತಮವಾಗಿ ಮೂಡಿಬರಲು ಕಾರಣರಾದರು. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. 



ಕರ್ನಾಟಕ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ಪೋಷಕರು, ಸ್ನೇಹಿತರು, ಕುಟುಂಬ ಸಮೇತರಾಗಿ ಆಗಮಿಸಿ ಸಂತೋಷದ ಕ್ಷಣಗಳನ್ನು ಹಂಚಿಕೊಂಡರು.

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...