ಗುರುವಾರ, ಆಗಸ್ಟ್ 3, 2023

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ! 

ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ... 

ಕೆಲವೊಮ್ಮೆ ಒಬ್ಬ ವ್ಯಕ್ತಿ ಸತ್ತ ಮೇಲೆ ಮನೆಯವರು ವಿವಿಧ ಕಾರಣಗಳಿಂದ ಅಂಗಾಂಗ ದಾನಗಳಿಗೆ ಒಪ್ಪಿಕೊಳ್ಳುತ್ತಾರೆ.  

ಸತ್ತ ವ್ಯಕ್ತಿ ತಾನು ಇರುವಾಗ ಒಪ್ಪಿದ್ದನೋ? ಇಲ್ಲವೋ? ಗೊತ್ತಿಲ್ಲ. ಆದರೂ ಅಂತವರನ್ನು ಟ್ರೋಲ್ ಮಾಡಿ ವೀರಾಧಿವೀರನೆಂದು ಹಾಡಿ ಹೊಗಳಿ ಕೊಂಡಾಡುತ್ತಾರೆ. 

ಆದರೆ 'ಅಂಗಾಂಗ ದಾನ' ದ ಬಗ್ಗೆ ತಮಗಿಷ್ಟ ಬಂದಂತೆ ಮಾಧ್ಯಮಗಳಲ್ಲಿ ಪ್ರಚಾರಪಡಿಸುವವರಲ್ಲಿ ಎಷ್ಟು ಜನ ತಾವು ಕೊನೆಯ ಪಕ್ಷ 'ನೇತ್ರದಾನ' ಮಾಡಿರಬಹುದು?????

ಈತನ್ಮದ್ಯೆ, ಎಷ್ಟೋ ವ್ಯಕ್ತಿಗಳು ತಾವು ಜೀವಂತವಿರುವಾಗಲೇ ಅಂಗಾಂಗ ದಾನಕ್ಕಾಗಿ ಸಮ್ಮತಿ ಪತ್ರವನ್ನು ಬರೆದುಕೊಟ್ಟಿರುತ್ತಾರೆ. ಆದರೆ ಈ ವಿಷಯವನ್ನು ಮುಕ್ತವಾಗಿ ತಿಳಿಸಲು ಹಿಂಜರಿದಿರುತ್ತಾರೆ. ತಮ್ಮ ಕುಟುಂಬ, ಬಂಧುಮಿತ್ರರ ನಡುವೆಯೇ ಹಂಚಿಕೊಳ್ಳದ ಎಷ್ಟೋ 

'ಮಹಾನ್ ಅಂಗಾಂಗ ದಾನಶೂರ ಶ್ರೇಷ್ಟ' ರು ನಮ್ಮ ನಡುವೆಯೇ ಇದ್ದಾರೆ. ಅಂತಹವರು ನೀವಾಗಿರಬಹುದಲ್ಲವೇ????









ವಿಷಾಧವೆಂದರೆ, ಒಂದು ವೇಳೆ ಇಂತಹ ವ್ಯಕ್ತಿಗಳ ಬಗ್ಗೆ ತಿಳಿದಿದ್ದರು ಯಾವೊಬ್ಬರೂ ಕೂಡ ಆತನ ಮೇಲೆ ಒಂದಿಷ್ಟು ಕೃತಜ್ಞತಾ ಭಾವವಿರಲಿ ಒಂದು ಒಳ್ಳೆಯ ಮಾತನ್ನು ಹೇಳಿರುವುದಿಲ್ಲ! 

ಆದ್ರೆ, ಸತ್ತ ಮೇಲೆ ಇಷ್ಟವಿತ್ತೋ ಇಲ್ಲವೋ? ಆತನನ್ನು ಮಹಾತ್ಮನ ಸ್ಥಾನದಲ್ಲಿ ಕೂರಿಸುತ್ತಾರೆ. ತಪ್ಪೇನಿಲ್ಲ!!

'ಬದುಕಿದ್ದಾಗಲೇ ಅಂಗಾಂಗಗಳು, ನೇತ್ರ ದಾನ ಮಾಡಲು ಬರೆದುಕೊಟ್ಟವರನ್ನು ಗುರುತಿಸಿ ಅಂತವರಿಗೆ  ಗೌರವಿಸಿ' 

ಅಂತವರ ಕಷ್ಟ ಸುಖವನ್ನು ವಿಚಾರಿಸಿ ಕಿಂಚಿತ್ತಾದರೂ ಇವರಿಗೆ ಕಷ್ಟದ ಸಮಯಗಳಲ್ಲಿ ಸಹಕಾರ, ಸಾಂತ್ವನ, ಹಿತವಾದ ಮಾತುಗಳನ್ನು ಹೇಳೋಣ ಎಂಬುದೇ ನನ್ನೀ ಬರಹದ ಮೂಲಕ ನನ್ನ ಕೋರಿಕೆ! 

'ದಾನ ಪತ್ರ' ಬರೆದುಕೊಟ್ಟವರಿಗೆ ನಿಮಗೆ ತಲೆಬಾಗಿ ನಮಸ್ಕರಿಸುತ್ತಾ ಹೃದಯಂತರಾಳದಿಂದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. 

ದಯವಿಟ್ಟು ತಮಗೆ ಇಚ್ಚಿಸಿದರೆ ಹೇಳಿಕೊಳ್ಳಿರಿ. *ಅಂಗಾಂಗ ದಾನ ಮಾಡಲು ಮನಸ್ಸು ಮಾಡೋಣ. ಬದುಕುವವರಿಗೆ ಬದುಕಾಗಿರೋಣ* ಧನ್ಯವಾದಗಳು.

: ರಾಬರ್ಟ್ ಇ. ಕವನ್ರಾಗ್, ಮೈಸೂರು

  9448942998

  robertekavanrag@gmail.com

ಮಂಗಳವಾರ, ಜುಲೈ 18, 2023

ಕನ್ನಡ ಕಸ್ತೂರಿ 2023 ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ

'ಕನ್ನಡ ಕಸ್ತೂರಿ 2023' 

ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ

'ಒಲವು ಫೌಂಡೇಶನ್ (ರಿ)' ವತಿಯಿಂದ ಕನ್ನಡ ಕಸ್ತೂರಿ 2023 ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 16.07.2023 ರಂದು ಮೈಸೂರಿನ 'ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣ' ದಲ್ಲಿ ಹಮ್ಮಿಕೊಳ್ಳಲಾಗಿತ್ತು. 

'ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ' ಯ ಸಹಯೋಗದಲ್ಲಿ ನೆರವೇರಿದ ಸಮಾರಂಭದಲ್ಲಿ 2023 ಸಾಲಿನ ಹತ್ತನೇ ತರಗತಿಯ ಕನ್ನಡ ವಿಷಯದಲ್ಲಿ ಸಂಪೂರ್ಣ ಅಂಕಗಳನ್ನು ಗಳಿಸಿದ ನೂರಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 'ಕನ್ನಡ ಕಸ್ತೂರಿ 2023' ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

'ಕವನ್ರಾಗ್ ಗಾಯನ ಸಂಗಮ'ದವರು ಸುಗಮ ಸಂಗೀತದ ಮೂಲಕ ನಾಡಪ್ರೇಮ ಗೀತೆ ಹಾಗೂ ಭಾವಗೀತೆಗಳನ್ನು ಸುಮಧುರವಾಗಿ ಹಾಡಿ ರಂಜಿಸಿದರು. 

ಅಶ್ವಿನಿ ಎನ್. ರವರು ಮಧುರವಾಗಿ ವೀಣೆಯಿಂದ ಗೀತೆಗಳನ್ನು ಪ್ರಸ್ತುತಪಡಿಸಿದರು. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದ ಧನುಷ್ ಎಂ. ಹಾಗೂ ಜಿನುತ ಬಿ.ಪಿ. ರವರು ಹಾಡಿದ ಭಾವಗೀತೆಗಳು ನೆರೆದವರನ್ನು ಮಂತ್ರಮುಗ್ದರನ್ನಾಗಿಸಿತು. ನಂತರದಲ್ಲಿ

ನೆರೆದವರ ಸಮ್ಮುಖದಲ್ಲಿ ಕನ್ನಡ ಧ್ವಜವನ್ನು ಹಾರಿಸುವುದರೊಂದಿಗೆ ಶ್ರೀ ಶಿವಯೋಗಿಶ್ವರ ಮಠದ         ಶ್ರೀ ಶ್ರೀ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿರವರು ಚಾಲನೆ ನೀಡಿದರು. ಒಕ್ಕೊರಲಿನಿಂದ ಎಲ್ಲರೂ ಕನ್ನಡ ಮಾತೆಗೆ ಜಯಕಾರ ಘೋಷಿಸುತ್ತಾ 'ಜಯ ಭಾರತ ಜನನಿಯ ತನುಜಾತೆ' ನಾಡಗೀತೆಯನ್ನು ಹಾಡಿದರು.

ಧನುಷ್ ಎಂ. ರವರು ಪ್ರಾರ್ಥನಾಗೀತೆಯೊಂದಿಗೆ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು. 

ಅಶ್ವಿನಿ ಎನ್. ರವರು ಸ್ವಾಗತ ಕೋರಿದರು. ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್ ರವರು ಪ್ರಸ್ತಾವಿಕ ನುಡಿಗಳನ್ನಾಡಿದರು.

ಸಮಾರಂಭದ ಉದ್ಘಾಟನೆಯನ್ನು ಶ್ರೀಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿಗಳು, ಶ್ರೀ ಶ್ರೀ ಬಸವಾನಂದ ಸ್ವಾಮಿ, 'ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ' ರಾದ ಮಡ್ಡೀಕೆರೆ ಗೋಪಾಲ್,  'ಚಲನಚಿತ್ರ ಸಂಗೀತ ನಿರ್ದೇಶಕರು ಹಾಗೂ ಧ್ವನಿತಂತ್ರಜ್ಣ' ರಾದ ಪಳನಿ ಡಿ. ಸೇನಾಪತಿ, 'ಚಲನಚಿತ್ರ ನಿರ್ಮಾಪಕರು ಮತ್ತು ಮೈಸೂರು ಪ್ರೆಸ್ ಕ್ಲಬ್ ನ ಅಧ್ಯಕ್ಷ' ರಾದ ಲಯನ್ ಡಾ. ಎಸ್. ವೆಂಕಟೇಶ್, ಫೌಂಡೇಶನ್ನಿನ್ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್ ನೆರವೇರಿಸಿಕೊಟ್ಟರು.

ಶ್ರೀ ಶ್ರೀ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿಗಳು ಮಾತಾಡುತ್ತಾ ಕನ್ನಡ ಸಂಸ್ಕೃತಿ ಹಾಗು ಮಾನವೀಯತೆಯ ಬದುಕಿನ ಮಕ್ಕಳಿಗೆ ಮನದಟ್ಟಾಗುವಂತೆ ಬೋಧಿಸಿದರು.

ಡಾ. ಎಸ್ ವೆಂಕಟೇಶ್ ರವರು ಕನ್ನಡ ಹಾಗೂ ವಿದ್ಯಾರ್ಥಿಗಳ ಪ್ರಸ್ತುತ ಸಾಮಾಜಿಕ ಚಿಂತನೆಗಳನ್ನು ತಿಳಿಸಿಕೊಡುತ್ತಾ ಸಾಹಿತ್ಯ ಸಂಗೀತದ ಬಗ್ಗೆ ಕಿವಿ ಮಾತುಗಳನ್ನು ಹೇಳಿದರು.

ಪಳನಿ ಸೇನಾಪತಿಯವರು ಕನ್ನಡ ನಾಡು ನುಡಿಗಳ ಬಗ್ಗೆ ನೆರೆದವರಲ್ಲಿ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು.

'ಕಲಾಧರೆ ಕಲ್ಚರಲ್ ಟ್ರಸ್ಟ್' ನ ಅಧ್ಯಕ್ಷರು ಹಾಗೂ ಪ್ರಖ್ಯಾತ ನೃತ್ಯ ನಿರ್ದೇಶಕರಾದ ಚಾಮರಾಜ್ ರವರು ವೇದಿಕೆಯಲ್ಲಿದ್ದರು.

*ನಾವೂ ಹಾಡುತ್ತೇವೆ* ಗಾಯನ ಸಂಗಮದ ಉದ್ಘಾಟನೆಯನ್ನು ಡಾ. ಲಯನ್ ವೆಂಕಟೇಶ್ ಹಾಗೂ ಪಳನಿ ಸೇನಾಪತಿಯವರು ನಡೆಸಿಕೊಟ್ಟರು.

'ಕನ್ನಡ ಕಸ್ತೂರಿ 2023' ರಾಜ್ಯ ಪ್ರಶಸ್ತಿಯನ್ನು ಕನ್ನಡದ ಶಲ್ಯ ಹೊದಿಸುವುದರ ಮೂಲಕ ಸಂಪೂರ್ಣ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೀಡಿ ಸನ್ಮಾನಿಸಲಾಯಿತು.

ಸಂಪೂರ್ಣ ಸಮಾರಂಭದ ಜವಬ್ದಾರಿಯನ್ನು ಮತ್ತು ಸಮಾರಂಭವು ಉತ್ತಮವಾಗಿ ನಡೆಯಲು ರಾಬರ್ಟ್ ಕವನ್ರಾಗ್ ಹಾಗೂ ತಂಡದವರು ಶ್ರಮಿಸಿದ್ದನ್ನು ಗಣ್ಯರು ಹಾಗೂ ಆಗಮಿಸಿದ್ದ ಎಲ್ಲರೂ ಪ್ರಶಂಸಿದರು.


ಮೆಲ್ವಿನ್ ಜ್ಞಾನಸುಂದರ್, ಅಕ್ಮಲ್ ಪಾಷ, ಮಂಜುಳ ರುದ್ರೆ ಗೌಡ, ಕಸ್ತೂರಿ, ಮನೋಹರ್, ಮಾದೇಶ, ಆಲ್ಫ್ರಡ್ ವಿವೇಕ್... ಮತ್ತಿತ್ತರು ಸಮಾರಂಭವನ್ನು ಹಚ್ಚುಕಟ್ಟಾಗಿ ನಿರ್ವಹಿಸಲು ಸಹಕರಿಸಿದರು. 

ಸುಗಮ ಸಂಗೀತದಲ್ಲಿ ನಿತಿನ್ ಲಾರೆನ್ಸ್ ರವರು ಕೀಬೋರ್ಡ್, ಮಹದೇವು ತಬಲ, ಆಶ್ವಿನಿ ಎನ್. ವೀಣೆ ಹಾಗೂ ರೆಯಾನ್ ಕೀಬೋರ್ಡ್ ಮೂಲಕ ನಡೆಸಿಕೊಟ್ಟರು.

ಮಮತಾರವರು ಸಂಪೂರ್ಣ ಕಾರ್ಯಕ್ರಮ ನಿರೂಪಣೆಯ ಹೊಣೆಹೊತ್ತು ಕಾರ್ಯಕ್ರಮವು ಉತ್ತಮವಾಗಿ ಮೂಡಿಬರಲು ಕಾರಣರಾದರು. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. 



ಕರ್ನಾಟಕ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ಪೋಷಕರು, ಸ್ನೇಹಿತರು, ಕುಟುಂಬ ಸಮೇತರಾಗಿ ಆಗಮಿಸಿ ಸಂತೋಷದ ಕ್ಷಣಗಳನ್ನು ಹಂಚಿಕೊಂಡರು.

ಮಂಗಳವಾರ, ಜನವರಿ 31, 2023

ವಿಶ್ವ ಶಾಂತಿ ದಿನಾಚರಣೆ



 ಮೈಸೂರಿನ ಸಂತ ಜೋಸೆಫರ ಪ್ರಧಾನಾಲಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ  ಕ್ರೈಸ್ತ ಪೀಠದ ಸಹಯೋಗದಲ್ಲಿ  

ಸಂತ ಫಿಲೋಮಿನಾ ಪುಣ್ಯಕ್ಷೇತ್ರ ಆವರಣದಲ್ಲಿ 

ವಿಶ್ವ ಶಾಂತಿ ದಿನಾಚರಣೆ



ಮೈಸೂರು ಜನವರಿ ೩೦, ೨೦೨೩ : ವಿಶ್ವದಲ್ಲಿ ಶಾಂತಿ, ಪ್ರೀತಿ, ಐಕ್ಯತೆಯನ್ನು ನೆಲಸುವಂತೆ  ಶಾಂತಿ ದಿನಾಚರಣೆಯನ್ನು ಸರ್ವ ಧರ್ಮಗಳ ಸಂದೇಶದ ಮೂಲಕ ಆಚರಿಸಲಾಯಿತು.

ವಿಶ್ರಾಂತ ಮಹಾಧರ್ಮಾಧ್ಯಕ್ಷರು ಹಾಗೂ ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳಾದ ಪರಮ ಪೂಜ್ಯ ಡಾ. ಬೆರ್ನಾಡ್ ಮೊರಾಸ್‌ರವರು ಅಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ,      ಡಾ. ಕೆ. ಜಾವೀದ್ ನಯಿಮ್, ಮೈಸೂರು ಧರ್ಮಕ್ಷೇತ್ರದ ಎಪಿಸ್ಕೋಪಲ್ ಶ್ರೇಷ್ಠಗುರುಗಳಾದ ಅತಿ ವಂ. ಡಾಮಿನಿಕ್ ವಾಸ್ ಓಸಿಡಿಯವರು ಆಗಮಿಸಿದ್ದರು.


ಗೌರವಾನ್ವಿತ  ಅತಿಥಿಗಳಾಗಿ ಮೈಸೂರು ಧರ್ಮಕ್ಷೇತ್ರದ ಶ್ರೇಷ್ಟಗುರು ಅತಿ ವಂ. ಆಲ್ಪ್ರೆಡ್  ಜಾನ್ ಮೆಂಡೊನ್ಸಾ, ಮೈಸೂರು ವಿಶ್ವವಿದ್ಯಾಲಯದ ಕ್ರೈಸ್ತ ಧರ್ಮ ವಿಭಾಗದ ಅಧ್ಯಕ್ಷರಾದ ವಂ. ಡಾ. ವ್ಯಾಲಿಂಟಿನ್ ರಾಜೇಂದ್ರ ಕುಮಾರ್, ಮೈಸೂರು ವಿಶ್ವವಿದ್ಯಾಲಯದ ಕ್ರೈಸ್ತ ಧರ್ಮ ವಿಭಾಗದ ಪ್ರೊಪೆಸರ್ ಡಾ. ಜಾನ್ ಪೀಟರ್ ಲಾಜರ್ ಉಪಸ್ಥಿತರಿದ್ದರು.

ಸಂತ ಜೋಸೆಫರ ಪ್ರಧಾನಾಲಯದ ಧರ್ಮಗುರುಗಳಾದ ವಂ. ಗುರು ಸ್ಟ್ಯಾನಿ ಡಿ’ಆಲ್ಮೇಡಾ ರವರು ಎಲ್ಲರನ್ನೂ ಸ್ವಾಗತಿಸಿದರು. ಗಣ್ಯರು ದೀಪ ಬೆಳಗುವುದರೊಂದಿಗೆ ಮತ್ತು ಶಾಂತಿಯ ಸಂದೇಶವಾಗಿ ಪಾರಿವಾಳ ಹಾರಿಬಿಡುವುದರೊಂದಿಗೆ ಶಾಂತಿಯ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಶ್ರೀ ಚಿದಾನಂದ ಸ್ವಾಮೀಜಿ, ಶ್ರೀ ಜಾವೀದ್ ನಯಿಮ್ ಹಾಗೂ ಅತೀ ವಂ. ಡಾಮಿನಿಕ್ ವಾಸ್‌ರವರು ಶಾಂತಿಯ ಕುರಿತು ತಮ್ಮ ಮನದಾಳದ ಸಂದೇಶವನ್ನು ಸಾರಿದರು.




ಸಂತ ಆನ್ಸ್ ಪ್ರೌಢಶಾಲೆ, ಪ್ರಬೋಧನಾ ಪಲೊಟೈನ್ ಬ್ರದರ್ಸ್, ಸಂತ ಮೇರಿಸ್ ಪ್ರೌಢಶಾಲೆ,  ಶ್ರೀ ಕ್ರಿಸ್ಟಿ ಮತ್ತು ಶ್ರೀ ಟೋನಿ ತಂಡದವರು ಶಾಂತಿ ಸಂದೇಶವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟರು. 





ಕ್ರೈಸ್ತ ಧರ್ಮ ವಿಭಾಗದವರು ವಂದನಾರ್ಪಣೆಯನ್ನು ಮಾಡಿದರು.

ಶನಿವಾರ, ಜನವರಿ 28, 2023

'ಸೆಂಟ್ ರ‍್ನಾಲ್ಡ್ ಕೇಂದ್ರೀಯ ವಿದ್ಯಾಲಯ' ದಲ್ಲಿ 'ಉಚಿತ ಕಣ್ಣಿನ ತಪಾಸಣೆ ಹಾಗೂ ಜಾಗೃತಿ ಶಿಬಿರ'

    'ಒಲವು ಫೌಂಡೇಶನ್' ಹಾಗೂ ಮೈಸೂರಿನ 'ಏ.ಎಸ್.ಜಿ. ಕಣ್ಣಿನ ಆಸ್ಪತ್ರೆ' ಯ                        ಸಹಯೋಗದಲ್ಲಿ 'ಸೆಂಟ್ ರ‍್ನಾಲ್ಡ್ ಕೇಂದ್ರೀಯ ವಿದ್ಯಾಲಯ' ದಲ್ಲಿ                  'ಉಚಿತ ಕಣ್ಣಿನ ತಪಾಸಣೆ ಹಾಗೂ ಜಾಗೃತಿ ಶಿಬಿರ'


2023 ಜನವರಿ 23 ಮತ್ತು 24 ರಂದು ನಡೆದ ಎರಡು ದಿನಗಳ ಈ ಅಭಿಯಾನದ ಶಿಬಿರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಸೇರಿದಂತೆ ಸುಮಾರು 1,300 ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಕೊಂಡರು.




ಬೆಳಗ್ಗಿನ ಶಾಲಾ ಪ್ರಾರ್ಥನಾ ಸಮಯದಲ್ಲಿ ಆಸ್ಪತ್ರೆಯ ಕೇಂದ್ರೀಯ ವ್ಯವಸ್ಥಾಪಕರಾದ ವಿಜಯನ್ ಫ್ರಾನ್ಸಿಸ್,  ಒಲವು ಫೌಂಡೇಶನ್ ನ್ನಿನ ಸಂಸ್ಥಾಪಕ ರಾಜ್ಯಾದ್ಯಕ್ಷರಾದ          ರಾಬರ್ಟ್  ಕವನ್ರಾಗ್, ಆಸ್ಪತ್ರೆಯ ಉಸ್ತುವಾರಿಗಳಾದ ನಾಗೇಂದ್ರ, ಫೌಂಡೇಶನ್ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ನೇತ್ರ ತಜ್ಞರಾದ ಡಾ. ಶಿಲ್ಪಶ್ರೀ, ಡಾ. ಗಿರೀಶ್ ,ಮಧುರವರು, ಫೌಂಡೇಶನ್ನಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಜಯನ್ ರವರು ಸವಿವರವಾಗಿ ಎಲ್ಲರಿಗೂ ಕಣ್ಷಿನ ಜಾಗೃತಿಯ ಬಗ್ಗೆ ಅರಿವು ಮೂಡಿಸಿದರು. 

ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಫಾದರ್ ಸುನಿಲ್ ಮೆನೆಜೆಸ್ ರವರು ವಿದ್ಯಾರ್ಥಿಗಳಲ್ಲಿ ಶಿಬಿರದ ಮಹತ್ವವನ್ನು ತಿಳಿಕೊಟ್ಟು  ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ವಿದ್ಯಾಸಂಸ್ಥೆಯ ಮುಖ್ಯ ವ್ಯವಸ್ಥಾಪಕರಾದ ಫಾದರ್ ಲಾರೆನ್ಸ್ ಕೊರೇ, ನಿರ್ವಾಹಕರಾದ ಫಾದರ್ ಸಾಲೋಮನ್ ರೆಡ್ಡಿರವರು ಸಲಹೆ ಸೂಚನೆಗಳನ್ನು ನೀಡಿದರು. ಸಂಸ್ಥೆಯ




ಸಂಸ್ಥೆಯ ಶಿಕ್ಷಕರುಗಳು, ಶಾಲಾ ಸಿಬ್ಬಂದಿ ರ‍್ಗದವರು ಶಿಬಿರವು ಉತ್ತಮವಾಗಿ ನೆರವೇರಲು ಸಹಕರಿಸಿದರು.

ಶನಿವಾರ, ಜನವರಿ 7, 2023

ಮೈಸೂರು ಕಥೋಲಿಕ ಧರ್ಮಕ್ಷೇತ್ರಕ್ಕೆ ಆಡಳಿತಾಧಿಕಾರಿಗಳ ನೇಮಕ

 ✝️ಮೈಸೂರು ಧರ್ಮಪ್ರಾಂತ್ಯದ  ಆಡಳಿತ ಅಧಿಕಾರಿಯಾಗಿ ಬೆಂಗಳೂರಿನ ನಿವೃತ ಮಹಾ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಬರ್ನಾಡ್ ಬ್ಲೇಸಿಯಸ್ ಮೊರಾಸ್ 

ಜನವರಿ 07, 2023 ರಂದು  ಮೈಸೂರಿನ ಧರ್ಮಾಧ್ಯಕ್ಷರಾದ ಪೂಜ್ಯ ಡಾ.  ಕೆ ಎ ವಿಲಿಯಂ ಅವರನ್ನು ವೈದ್ಯಕೀಯ ರಜೆಗೆ ಕಳುಹಿಸುವ ಆದೇಶವನ್ನು ಹೊರಡಿಸಿತು ಮತ್ತು ಬೆಂಗಳೂರಿನ ಆರ್ಚ್‌ ಡಯಾಸಿಸ್‌ನ ಮಹಾಧರ್ಮಾಧ್ಯಕ್ಷರು  ನಿವೃತ್ತ ಮಹಾಧರ್ಮಾಧ್ಯಕ್ಷರಾದ ಡಾ. ಬರ್ನಾಡ್ ಮೊರಾಸ್ ಅವರನ್ನು ಮೈಸೂರು ಡಯಾಸಿಸ್‌ನ ಅಪೋಸ್ಟೋಲಿಕ್ ಅಡ್ಮಿನಿಸ್ಟ್ರೇಟರ್ ಆಗಿ ನೇಮಿಸಿತು.

ಜನವರಿ 07, 2023 ರಂದು ಸಂಜೆ ಸಂತ ಜೋಸೆಫರ ಪ್ರಧಾನಾಲಯದಲ್ಲಿ ವಿಶೇಷ ಬಲಿಪೂಜೆ ನೆರವೇರಿತು. ನೇಮಕ ಪತ್ರವನ್ನು ಓದಲಾಯಿತು. ಮೈಸೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರಾದ ಪೂಜ್ಯ ಡಾ. ಅಂತೋನಿ ವಾಜ಼ಪಿಳ್ಳಿ, ಧರ್ಮಗುರುಗಳು, ಕನ್ಯಾಸ್ತ್ರೀಯರು, ಭಕ್ತಜನರು ಭಾಗವಹಿಸಿದ್ದರು.





ಮಂಗಳವಾರ, ಡಿಸೆಂಬರ್ 20, 2022

‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ : 'ಅಲ್-ಕಬೀರ್ ಶಾಲೆ’

 ‘ಒಲವು ಫೌಂಡೇಶನ್ (ರಿ)’ ಹಾಗೂ ‘ಏ. ಎಸ್. ಜೆ. ಕಣ್ಣಿನ ಆಸ್ಪತ್ರೆ’ ಸಹಯೋಗದಲ್ಲಿ

ಶಾಲಾ ಮಕ್ಕಳಿಗೆ ‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ ಅಭಿಯಾನ











ಮೈಸೂರು ೨೦ ಡಿಸೆಂಬರ್ ೨೦೨೨ : ‘ಒಲವು ಫೌಂಡೇಶನ್ (ರಿ)’ ಹಾಗೂ ‘ಏ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಅಕ್ಟೋಬರ್ ೧೩ ಮತ್ತು ೧೪ನೇ ತಾರೀಖಿನಂದು ‘ವಿಶ್ವ ದೃಷ್ಟಿ ದಿನಾಚರಣೆ’ ಅಂಗವಾಗಿ ಶಾಲಾ ಮಕ್ಕಳಿಗೆ ಕಣ್ಣಿನ ಬಗ್ಗೆ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರದ ಅಭಿಯಾನವು ಮುಂದುವರೆದಿದೆ. 

ಮೈಸೂರಿನ ಬನ್ನಿಮಂಟಪದ ಎಸ್.ಎಸ್. ನಗರದ ‘ಅಲ್-ಕಬೀರ್ ಶಾಲೆ’ಯಲ್ಲಿ ಶಿಬಿರವನ್ನು ಇಂದು ಆಯೋಜಿಸಲಾಗಿತ್ತು. ಸುಮಾರು ೧೫೦ಕ್ಕೂ ಹೆಚ್ಚು ಶಾಲಾ ಮಕ್ಕಳು, ಶಿಕ್ಷಕ ಶಿಕ್ಷಕಿಯರು ಹಾಗೂ ಶಾಲಾ ಸಿಬ್ಬಂದಿಗಳು ಶಿಬಿರದ ಉಪಯೋಗವನ್ನು ಪಡೆದರು.

ಆಸ್ಪತ್ರೆಯ ಮೇಲ್ವಿಚಾರಕರಾದ ವಿಜಯನ್ ಫ್ರಾನ್ಸಿಸ್‌ರವರು ಕಣ್ಣಿನ ಜಾಗೃತಿಯ ಬಗ್ಗೆ ವಿವರವಾಗಿ ಎಲ್ಲರಿಗೂ ತಿಳಿಸಿಕೊಟ್ಟರು. ‘ಒಲವು ಫೌಂಡೇಶನ್’ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಇ. ಕವನ್ರಾಗ್, ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಸಾಪ್ಟ್ ಸ್ಕಿಲ್ ತರಬೇತಿದಾರರಾದ ಸಯ್ಯದ್ ಅಫ್ತಾಬ್,……ಆಸ್ಪತ್ರೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ನಾಗೇಂದ್ರ, ಡಾ. ಶಿಲ್ಪಶ್ರೀ, ಫೌಂಡೇಶನ್ನಿನ ಮನೋಹರ್, ಶಾಲಾ ಮೇಲ್ವಿಚಾರಕರಾದ ಸೈದಾ ನಿದಾ, ಶಿಕ್ಷಕ ಶಿಕ್ಷಕಿ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು ಶಿಬಿರ ಉತ್ತಮವಾಗಿ ನೆರವೇರಲು ಸಹಕರಿಸಿದರು.


*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...