ಒಲವು ಫೌಂಡೇಶನ್ ಮತ್ತು ಎ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ, ಮೈಸೂರಿನ ಅಧ್ಯಯನ ಶಾಲಾ ಮಕ್ಕಳಿಗೆ *ಉಚಿತ ಕಣ್ಣಿನ ತಪಾಸಣೆ ಮತ್ರು ಜಾಗೃತಿ ಶಿಬಿರ* 29.11.2022
‘ಒಲವು ಫೌಂಡೇಶನ್ (ರಿ)’ ಆಯೋಜಿಸಿ ಮೈಸೂರಿನ ‘ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ’ಯ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ‘ಕಣ್ಣಿನ ಬಗ್ಗೆ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ ವನ್ನು ನವೆಂಬರ್ ೨೯, ೨೦೨೨ ರಂದು ಮೈಸೂರಿನ ಶಕ್ತಿನಗರದ ಅಧ್ಯಯನ ಶಾಲೆಯಲ್ಲಿ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಫೌಂಡೇಶನ್ನಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪುಟ್ಟಸ್ವಾಮಿ, ಕಾರ್ಯದರ್ಶಿ ಶ್ರೀಮತಿ ಪಾರ್ವತಿ ದೇವಿ, ರಾಜ್ಯ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಸಂಚಾಲಕರಾದ ವಿಲಿಯಂ ಪುಷ್ಪರಾಜ್, ನಿರ್ದೇಶಕÀ ಮನೋಹರ್, ಮಾರ್ಕೆಟಿಂಗ್ ಮುಖ್ಯ ಕಾರ್ಯನಿರ್ವಾಹಕ ನಾಗೇಂದ್ರ, ನೇತ್ರ ತಜ್ಞ ಮುಜೀ಼ರ್ ಮುಂತಾದವರು ಉಪಸ್ಥಿತರಿದ್ದರು.
‘ದೃಷ್ಟಿ ದಿನ’ ಅಕ್ಟೋಬರ್ ೧೩ ರಂದು ಅಭಿಯಾನ ಆರಂಭಿಸಲಾಗಿದ್ದು, ಒಂದು ವರ್ಷದವರೆಗೆ ಶಿಬಿರವು ಮುಂದುವರೆಯಲಿದೆ. ಮೈಸೂರು ಜಿಲ್ಲೆಯ ವಿವಿಧ ಶಾಲಾಕಾಲೇಜುಗಳ ಮುಖ್ಯಸ್ಥರು ಈಗಾಗಲೇ ಶಿಬಿರಕ್ಕೆ ಸಮ್ಮತಿಸಿದ್ದಾರೆ. ಹೆಬ್ಬಾಳ ಶಿಕ್ಷಕರರ್ಣಿ ಕೇಂದ್ರೀಯ ಶಾಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮೈಸೂರಿನ ಶ್ರೀ ಭೈರವೇಶ್ವರ ಶಾಲೆ, ಶ್ರೀ ಜಯಲಕ್ಷಿö್ಮ ವಿಲಾಸ ಶಾಲೆ, ಅಕ್ಕನ ಬಳಗ ಶಾಲೆಗಳಲ್ಲಿ ಶಿಬಿರವನ್ನು ಆಯೋಜಿಲಾಗಿತ್ತು. ಈವರೆಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕರು, ಶಿಕ್ಷಕರೇತರು, ಪೋಷಕರುಗಳು ಸೇರಿದಂತೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಕಣ್ಣಿನ ತಪಾಸಣೆಯನ್ನು ಮಾಡಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ