ಗುರುವಾರ, ನವೆಂಬರ್ 17, 2022

‘ಒಲವು ಫೌಂಡೇಶನ್ (ರಿ)’ ವತಿಯಿಂದ ಶಾಲಾ ಮಕ್ಕಳಿಗೆ ‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ ಅಭಿಯಾನ

‘ಒಲವು ಫೌಂಡೇಶನ್ (ರಿ)’ ಆಯೋಜಿಸಿದ ಮೈಸೂರಿನ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ‘ಕಣ್ಣಿನ ಬಗ್ಗೆ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ದ ಅಭಿಯಾನ ಆರಂಭಿಸಲಾಗಿದೆ. ಒಂದು ವರ್ಷದವರೆಗೆ ಶಿಬಿರವು ಮುಂದುವರೆಯಲ್ಲಿದ್ದು, ಮೈಸೂರು ಜಿಲ್ಲೆಯ ವಿವಿಧ ಶಾಲಾಕಾಲೇಜುಗಳ ಮುಖ್ಯಸ್ಥರು ಈಗಾಗಲೇ ಶಿಬಿರಕ್ಕೆ ಸಮ್ಮತಿಸಿದ್ದಾರೆ. ಹೆಬ್ಬಾಳ ಶಿಕ್ಷಕರರ್ಣಿ ಕೇಂದ್ರೀಯ ಶಾಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಸುಮಾರು ೮೦೦ ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಹಾಗೂ ಶಿಕ್ಷಕ, ಶಿಕ್ಷಕಿಯರು ಮತ್ತು ಶಾಲಾ ಸಿಬ್ಬಂಧಿ ವರ್ಗದವರಿಗೆ ತಪಾಸಣೆ ನಡೆಸಲಾಗಿದೆ. ಮುಂದುವರೆದು ಮೈಸೂರಿನ ಹೆಬ್ಬಾಳದ ಶ್ರೀ ಭೈರವೇಶ್ವರ ಶಾಲೆಯಲ್ಲಿ ಶಿಬಿರವನ್ನು ಆಯೋಜಿಲಾಗಿತ್ತು. ಸುಮಾರು ೬೦೦ ಕಣ್ಣಿನ ತಪಾಸಣೆ ಮಾಡಲಾಗಿದೆ. 









ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್ ಮಾತಾಡುತ್ತಾ, 

‘ಕೊರೊನಾದ ಪರಿಣಾಮವಾಗಿ ಎಲ್ಲಾ ಶಾಲಾಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳನ್ನು ಆರಂಭಿಸಿದ ಪರಿಣಾಮವಾಗಿ, ಸಾಕಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಅಲ್ಲದೆ ಶಿಕ್ಷಕರುಗಳು ಕಣ್ಣಿನ ತೊಂದರೆಗೆ ಸಿಲುಕಿದ್ದಾರೆ. ಕಣ್ಣು ಎಲ್ಲರಿಗೂ ಅತ್ಯಮೂಲ್ಯವಾದದ್ದು. ಆದ್ದರಿಂದ ‘ಒಲವು ಫೌಂಡೇಶನ್’ ನ್ನ ನೇತೃತ್ವದಲ್ಲಿ ಕಣ್ಣಿನ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಆರಂಭಿಸಲಾಗಿದೆ.’ ಎಂದು ತಿಳಿಸಿದರು.

ಎಎಸ್‌ಜಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಪವನ್ ವಿ. ಜೋಷಿಯವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅಸ್ಪತ್ರೆಯ ವ್ಯವಸ್ಥಾಪಕರಾದ ವಿಜಯ್ ಫ್ರಾನ್ಸಿಸ್, ಉಸ್ತುವಾರಿ ನಾಗೇಂದ್ರರವರು ಹಾಗೂ ಫೌಂಡೇಶನ್ನಿನ ಸಂಚಾಲಕರಾದ ವಿಲಿಯಂರವರು ಕಣ್ಣಿನ ರಕ್ಷಣೆಯ ಬಗ್ಗೆ ಮಾಹಿತಿಗಳನ್ನು ನೀಡಿ ಎಲ್ಲರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ. ನೇತ್ರ ತಜ್ಞರಾದ ಡಾ. ಶಿಲ್ಪಶ್ರೀರವರು ತಪಾಸಣೆಯನ್ನು ನಡೆಸುತ್ತಿದ್ದಾರೆ. 

ಫೌಂಡೇಶನ್ನಿನ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ರಾಜ್ಯ ಕಾರ್ಯಾಧ್ಯಕ್ಷರಾದ ಮಂಜುಳಾ ಆರ್. ಗೌಡ, ನಿರ್ದೇಶಕರುಗಳಾದ ಮನೋಹರ್, ಪ್ರೇಮ, ಸಚ್ಚಿನ್ ಜೈನ್, ಎ.ಎಂ.ಬಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ ಎಸ್., ಶಾಲಾ ಆಡಳಿತಾಧಿಕಾರಿಗಳಾದ ಪಂಚಾಕ್ಷರಿ ಬಿ.ಆರ್., ಮುಖ್ಯೋಪಾಧ್ಯಾಯರಾದ ಕಾಮಾಕ್ಷಿ, 

ಆಸ್ಪತ್ರೆಯ ನನ್ಬನ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

ಕಾಮೆಂಟ್‌ಗಳಿಲ್ಲ:

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...