ಶಿಕ್ಷಣವಿಲ್ಲದ ಊರಿಲ್ಲ, ಶಿಕ್ಷಕರಿಲ್ಲದೆ ಶಿಕ್ಷಣವಿಲ್ಲ. ಶಿಕ್ಷೆ ಇಲ್ಲದೆ ಸರಿದಾರಿಗೆ ತರುವ ಬೇರೆ ಮಾರ್ಗವೇ ಇಲ್ಲ!?
+ ದೇವರೂ ಸಹ ಸೂಕ್ತ ಕಾರಣಗಳಿಗಾಗಿ ಭಕ್ತರನ್ನು ಶಿಕ್ಷಿಸುತ್ತಾರೆ.
+ ಹೆತ್ತವರು ಮಕ್ಕಳ ಒಳ್ಳೆಯ ಭವಿಷ್ಯದ ಮುಂದಾಲೋಚನೆಯಿಂದ ಶಿಕ್ಷಿಸುತ್ತಾರೆ.
+ ಶಿಕ್ಷಕರು ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಿಸುತ್ತಾರೆ.
+ ಹಿರಿಯರು ಕಿರಿಯರ ಒಳಿತಿಗಾಗಿ ತಮ್ಮ ಅನುಭವಗಳನ್ನು ತಾಳೆ ಹಾಕುತ್ತ ಶಿಕ್ಷಿಸುವ ಬಗ್ಗೆ ಎಚ್ಚರಿಸುತ್ತಾರೆ.
ಹೀಗೆ ಶಿಕ್ಷೆ ಎಂಬುದು ನಾಗರಿಕತೆಯ ಪರಿಧಿಯಲ್ಲಿ ಮಾತ್ರವಲ್ಲ ಮಾನವ ಅಸ್ಥಿತ್ವವು ಈ ಭೂಲೋಕದಲ್ಲಿ ಬಂದ ಗಳಿಗೆಯಿಂದಲೂ ಇದೆ.
ಅಷ್ಟೇ ಅಲ್ಲ ಭೂಕಂಪ, ಚಂಡಮಾರುತ, ಬಿರುಗಾಳಿ, ಜಲಪ್ರಳಯ, ಕಾಡ್ಗಿಚ್ಚು ಹೀಗೆ ಅನೇಕ ಪ್ರಕೃತಿ ವಿಕೋಪಗಳು ಧರೆಯನ್ನು ನಿರ್ನಾಮ ಮಾಡಲು ಅಲ್ಲ. ಮಾನವರನ್ನು ಎಚ್ಚರಿಸಲು ತೋರಿಸುವ ಶಿಕ್ಷೆಗಳಾಗಿವೆ.
ಅಂತೆಯೇ ಶಿಕ್ಷಿಸುವವರು ಶಿಕ್ಷೆಯನ್ನು ನೀಡುವುದು ಇತರರ ಒಳಿತಿಗಾಗಿಯೇ!
ಶಿಕ್ಷೆಯನ್ನು ಮತ್ತೊಬ್ಬರ ಅಳಿವಿಗಾಗಿ ನೀಡಿದ್ದಾರೆ ಎಂದಾಗ ಅದು ಶಿಕ್ಷೆ ಎನಿಸಿಕೊಳ್ಳದು. ಅದು ದ್ವೇಷ ಎನಿಸಿಕೊಳ್ಳುತ್ತದೆ.
ಆದರೆ ಮೂಢರಾಗಿ ವಿನಾಶದತ್ತ ಪಯಣಿಸುತ್ತಿರುವ ಈ ನಾಗರಿಕ ಸಮಾಜದಲ್ಲಿ ಹಿಡಿತವಿಲ್ಲದೆ ಬಾಳುತ್ತಿರುವ ಮಾನವರು ಶಿಕ್ಷೆಯನ್ನು ಬೇರೆ ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದಾರೆ.
ಆದರೆ ಮೂಢರಾಗಿ ವಿನಾಶದತ್ತ ಪಯಣಿಸುತ್ತಿರುವ ಈ ನಾಗರಿಕ ಸಮಾಜದಲ್ಲಿ ಹಿಡಿತವಿಲ್ಲದೆ ಬಾಳುತ್ತಿರುವ ಮಾನವರು ಶಿಕ್ಷೆಯನ್ನು ಬೇರೆ ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದಾರೆ.
ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ವಿವಿಧ ಕಾನೂನು ಕ್ರಮಗಳನ್ನು, ರೀತಿನೀತಿಗಳನ್ನು ರೂಪಿಸಿಕೊಂಡು ತಮ್ಮದೇ ಆದಂತಹ ದಾರಿ ಹಿಡಿಯಲು ಅನುಕೂಲಕರ ವಾತಾವರಣಗಳನ್ನು ನಿರ್ಮಿಸಿಕೊಂಡಿದ್ದಾರೆ.
ಹಿಂದೆ ತಮ್ಮ ಮಕ್ಕಳ ಒಳಿತಿಗಾಗಿ ಶಿಕ್ಷೆ ನೀಡಲು, ಶಿಕ್ಷೆ ಕೊಡಿಸಲು ಹಿಂದೇಟು ಹಾಕುತ್ತಿರಲಿಲ್ಲ. ಸಮಾಜದಲ್ಲಿನ ದುಷ್ಟತನ, ದರೋಡೆ, ಮೋಸ, ವಂಚನೆಗಳನ್ನು ತೊಡೆದು ಹಾಕಲು ಅಪರಾಧಗಳಿಗೆ ತಕ್ಕಂತ ಶಿಕ್ಷೆಯನ್ನು ರೂಪಿಸಲಾಗಿದೆ. ಧಾರ್ಮಿಕವಾಗಿಯೂ ಪಾಪಗಳಿಗೆ ಶಿಕ್ಷೆಗಳು ನಿಗಧಿಯಾಗಿವೆ ಎಂದು ತಿಳುವಳಿಕೆ ಬೋಧಿಸಲಾಗುತ್ತದೆ.

ಇದರಿಂದ ಇಂದಿನ ಸಮಾಜದಲ್ಲಿ ಮಕ್ಕಳು ಮಕ್ಕಳಾಗಿ ಇರಲು, ಮಹಿಳೆಯರು ಮಹಿಳೆಯಾಗಿರಲು ಸೋಲುತ್ತಿದ್ದಾರೆ, ಗಂಡಸರುಗಳ ಮಿತಿಮೀರಿ ನಡತೆಗಳು.... ಶಿಕ್ಷೆಗಳಲ್ಲಿನ ಏರುಪೇರಿನಿಂದಲೇ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ದೊರೆಯುತ್ತವೆ.
ಆದ್ದರಿಂದ ಶಿಕ್ಷೆಗಳು ಶಿಕ್ಷಣಕ್ಕಾಗಿ, ಉತ್ತಮ ಫಲಭರಿತ ಪರಿಣಾಮಕ್ಕಾಗಿ ಎಂಬುದನ್ನು ಅರಿಯಬೇಕು.
ಈ ನಿಟ್ಟಿನಲ್ಲಿ ವೈಯಕ್ತಿಕವಾದ ವಿಚಾರಗಳನ್ನು ಪ್ರಸ್ತಾಪಿಸುವಾಗ ಅನೇಕರು ತಮ್ಮ ಬಾಳಿನಲ್ಲಿ ಸಂಭವಿಸುವ ಘಟನೆಗಳನ್ನು ಶಿಕ್ಷೆಗಳೆಂದು ಪರಿಗಣಿಸುತ್ತಾರೆ.

ಉದಾಹರಣೆಗೆ ಬಡತನ, ಅಪಘಾತಗಳು, ಅಸಂಭವ ಸನ್ನಿವೇಶಗಳು, ಸಾಂಸರಿಕ ಎಡರುತೊಡರಗಳು, ಬದಲಿಸದಾಗದಂತಹ ಕುಂದುಕೊರತೆಗಳು, ಸಂಬಂಧಗಳನ್ನು ಕಳೆದುಕೊಳ್ಳುವುದು, ಇತರರಿಂದ ತುಳಿತಕ್ಕೊಳಗಾಗುವುದು, ಸಾಂಧರ್ಬಿಕ ಶೋಕಗಳು... ಇತ್ಯಾದಿಗಳು.
ಇಂತಹ ನೋವಿನಲ್ಲಿ ಸಾಮಾನ್ಯವಾಗಿ ಇವುಗಳೆಲ್ಲವನ್ನೂ ದೇವರು ನೀಡಿರುವ ಶಾಪಗಳೆಂದು ದೂರುತ್ತಾರೆ.
ಅದರೆ ಯಾವ ವಿಷಯಗಳು ನಮ್ಮನ್ನು ಉತ್ತಮತೆಯತ್ತ ಕೊಂಡೊಯ್ಯಲು ಯಾವುದೇ ರೀತಿಯಲ್ಲಿ ಅನುಕೂಲಕರವಾಗಿ ಇರುವುದಿಲ್ಲವೋ ಖಂಡಿತ ಅವುಗಳು ಶಿಕ್ಷೆಗಳಲ್ಲ!
ಬದಲಾಗಿ ನಮ್ಮ ಅಜ್ಞಾನದಿಂದಲೋ, ಅಸಡ್ಡೆಯಿಂದಲೋ, ನಿರ್ಲಕ್ಷ್ಯದಿಂದಲೋ, ಇತರರು ನಮ್ಮ ಮೇಲೆ ಹಗೆ ತೀರಿಸಿಕೊಳ್ಳುವುದರಿಂದ ಸಂಭವಿಸುವುದಾಗಿದೆ.
ಕೆಲವೊಮ್ಮೆ ಶಿಕ್ಷೆಗಳಿಂದ ಯಾವುದೇ ಒಳ್ಳೆಯ ಫಲ ಸಿಗದಿರಬಹುದು. ಅಂದ ಮಾತ್ರಕ್ಕೆ ಅದು ಎಲ್ಲರಲ್ಲೂ ಒಂದೇ ವಿಧವಾಗಿ ಇರಲು ಸಾಧ್ಯವಿಲ್ಲ.
ನಮ್ಮ ಬಯಕೆಗಳಿಂದ ಉಂಟಾಗುವ ದೇವರ ವಿರುದ್ಧ ಮಾಡುವ ಅಪರಾಧಗಳಿಗೆ ಅಂತಿಮ ತೀರ್ಪಿದೆ.
ಆದ್ದರಿಂದಲೇ ಶಿಕ್ಷೆ ಎನ್ನುವುದರ ಬಗ್ಗೆ ಎಚ್ಚರಿಕೆಯಿರಬೇಕು.
- ಪಂಚೇಂದ್ರಿಯ ಬಯಕೆಗಳ ನಿಗ್ರಹ.
- ಮಾನಸಿಕ ವೈಪರೀತ್ಯಗಳ ತಡೆ.
- ಆಧ್ಯಾತ್ಮಿಕ ಕಟ್ಟಳೆ, ಅನುಕರಣೆಗಳಲ್ಲಿ ನಿಖರತೆ.
- ಲೌಕಿಕ ಮತ್ತು ಸ್ವರ್ಗೀಯ ಅಪರಾಧಗಳ ನಡುವಿನ ವ್ಯತ್ಯಾಸಗಳ ತಿಳುವಳಿಕೆ.
- ದೈವ ಪ್ರೀತಿ, ಮಾನವ ಪ್ರೀತಿಗಳ ಸ್ಪಷ್ಟವಾದ ನಿಲುವು.
- ಆಂತರಿಕ, ಬಾಹ್ಯ ಫಲಗಳ ಮೂಲ.
ಇಂತಹವುಗಳನ್ನು ಸೂಕ್ತವಾದ ದೃಷ್ಟಿಕೋನದಲ್ಲಿ ಪರಾಮರ್ಶಿಸಿ ತೀರ್ಮಾನಿಸಿಕೊಳ್ಳಬೇಕು.

ಉತ್ತಮ ಗುರಿಯತ್ತ ಗಮನವಿಟ್ಟು ಮುಂದಡಿಯಿಡುತ್ತಿರುವವರು ಶಿಕ್ಷೆಗಳನ್ನು, ವೈಯಕ್ತಿಕ ಋಣಾತ್ಮಕ ಚಿಂತೆಗಳನ್ನು ಅದಲುಬದಲು ಅನುಕರಿಸಿದೆಯಾದಲ್ಲಿ ನಿರ್ಧಿಷ್ಟವಾದ ಮುನ್ನೋಟವನ್ನು ಕಳೆದುಕೊಳ್ಳುವ ಸಂಭವವಿದೆ.
ಏಕೆಂದರೆ ಶಿಕ್ಷೆಯಿಲ್ಲದೆ ರಕ್ಷೆಯ ತೇಜಸ್ಸು ಪ್ರಜ್ವಲಿಸದು ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದು ವಿಚತ್ರವಾಗಿ ಕಂಡರೂ ಸಹ ವಿಭಿನ್ನ ಅನುಭವಗಳ ಮೂಲಕ ನಮಗೆ ಸಾಬೀತಾಗುವ ಸಾಧ್ಯತೆ ಇದೆ. ಯೇಸುಪ್ರಭುವಿಗೆ ಶಿಲುಬೆಯ ಮರಣದ ಕ್ರೂರ ಶಿಕ್ಷೆ ದೊರೆತಿದ್ದರಿಂದಲೇ ಮಾನವರ ರಕ್ಷಣೆಯಾಯಿತು. ಮನುಜನ ಬದುಕು ಹೊಸ ಹಾದಿಯನ್ನು ಹಿಡಿಯಿತು.
- ರಾಬರ್ಟ್ ಕವನ್ರಾಗ್, ಮೈಸೂರು -
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ