ನನ್ನ ಮಿತ್ರ ಸರಳ. ಸಮ್ಮಿತ್ರ. ಪ್ರೀತಿ, ನಿರ್ಮಲ ಮನಸ್ಸು ಅವನಲ್ಲಿತ್ತು. ಮೂಡಿ. ಸತ್ಯವಂತ.... ಸತ್ಯ ಹೇಳುವಾಗ ತಡವರಿಸುತ್ತಿದ್ದ. ಸುಳ್ಳು ಹೇಳುವಾಗ ಮುಗುಳ್ನಗುತ್ತಿದ್ದನು. ಇರಲಿ, ವಿಷಯ ಅದಲ್ಲ. ಆತ ಒಬ್ಬಂಟಿ ಮದುವೆಯಾಗಿರಲಿಲ್ಲ. ತಂದೆ ಇಲ್ಲದವ ತಾಯಿ, ಬಂಧುಗಳಿಂದ ದೂರವಿದ್ದ. ಪ್ರೀತಿಯಿತ್ತು ಆದರೆ ಒಟ್ಟಿಗಿರಲು ವಿಧಿ ಬರಹವಿರಲಿಲ್ಲ. ಒಬ್ಬಂಟಿಗನಾಗಿದ್ದ ಆತನೊಂದಿಗೆ ಒಂದು ಶ್ವಾನ ಜೊತೆಯಾಗಿತ್ತು. ತಾನು ಏನು ತಿಂದರೂ ಅದಕ್ಕೂ ಸಮ ಪಾಲಿತ್ತು. ಅತ್ಯಂತ ಪ್ರೀತಿಯಿಂದ ಅದನ್ನು ನೋಡಿಕೊಳ್ಳುತ್ತಿದ್ದನು. ಬಂಧು ಬಳಗ ಎಲ್ಲವು ಅವನಿಗೆ ಅದೇ ಆಗಿತ್ತು. ನಾಯಿಗೂ ಸಹ ಅದೇ ಆಗಿತ್ತು. ಒಂದು ದಿನ ಆತ ಮನೆಗೆ ಹಿಂದಿರುಗಿದ್ದ. ಎಂದಿನಂತೆ ತನ್ನ ಆತ್ಮಿಯ ಶ್ವಾನ ಅವನ ಮೇಲೆ ಎಗರಲಿಲ್ಲ. ಅದು ಅವನತ್ತ ಓಡಿ ಬರಲು ಅಸಾಧ್ಯವೆಂಬಂತೆ ಚಡಪಡಿಸುತ್ತಿತ್ತು. ಬಹುಶಃ ಉಷಾರಿಲ್ಲಬಹುದು ಎಂದು ಸುಮ್ಮನಾದ. ಅಂದು ಕೊಟ್ಟ ಆಹಾರ ಅರ್ಧಂಬರ್ದ ತಿಂದಿತ್ತು. ಮುಂದಿನ ದಿನಗಳಲ್ಲಿ ಅದು ಬಡಲಾಗುತ್ತಾ ಹೋಗಿತ್ತು. ಅದರಲ್ಲಿದ್ದ ಉತ್ಸಾಹ, ತುಂಟಾಟ ಇಲ್ಲವಾಗಿತ್ತು. ಈತನಿಗೂ ಅದನ್ನು ಗುರುತಿಸುವುದಕ್ಕೆ ಅಶಕ್ತನಾಗಿದ್ದನು. ಸರಿಯಾಗಬಹುದೆಂದು ಅದನ್ನು ಮುದ್ದಿಸುತ್ತಲೇ ಎಂದಿನಂತೆ ಅದಕ್ಕೆ ಪ್ರೀತಿ ತೋರಿಸುತ್ತಿದ್ದ. ಬರುಬರುತ್ತಾ ಅದು ಬಡಕಲಾಗುತ್ತಾ ಹೋಯಿತು. ಒಂದು ದಿನ ಅದರ ಪರಿಸ್ಥಿತಿ ತುಂಬಾ ಅಧೋಗತಿ ಇಳಿದಾಗ ಅವನಿಗೆ ಇದನ್ನು ಆಸ್ಪತ್ರೆಗೆ ತೋರಿಸಬೇಕೆಂಬ ಮನಸ್ಸು ಬಂದಿತ್ತು. ಸರಿ, ಪ್ರಾಣಿ ಡಾಕ್ಟರ್ ಬಳಿ ಕೊಂಡೋಯ್ದ. ಅಘಾತ ಕಾದಿತ್ತು ಎಲ್ಲೋ ಬೇಲಿಯಲ್ಲಿ ಓಡುವಾಗ ಒಂದು ವಿಷದ ಮುಳ್ಳು ಅದರ ಉದರಕ್ಕೆ ಚುಚ್ಚಿತ್ತು. ಅದು ಅಲ್ಲೇ ಇದ್ದು, ಸೆಪ್ಟಿಕ್ಕಿಗೆ ಕಾರಣವಾಯಿತು.
ಯಾರ ತಪ್ಪು ಗೊತ್ತಿಲ್ಲ. ಒಟ್ಟಿನಲ್ಲಿ ಆ ನಾಯಿಯ ದೇಹದಲ್ಲಿ ವಿಷ ಹರಡಿಕೊಂಡಿತ್ತು. ದಿನೇ ದಿನೇ ಅದರ ಪರಿಸ್ಥಿತಿ ಅಧೋಗತಿಗೆ ತಲುಪುತ್ತಿತ್ತು. ನೋವು, ಸರಿಯಾಗಿ ಊಟವಿಲ್ಲದೆ ಕೃಷವಾದ ನಾಯಿ ಕಾಲಕ್ರಮೇಣ ನಿಶಕ್ತಿಯಿಂದ ಮೈಮೇಲೆ ಹಿಡಿತವಿಲ್ಲದೆ ಒಂದೇ ಕಡೇ ಮಲಗುವಂತ ಪರಿಸ್ಥಿತಿ ಬಂದಿತ್ತು. ಒಂದು ದಿನ ಆತ ಇದರ ಪರಿಸ್ಥಿತಿಯನ್ನು ನೋಡುತ್ತಾ ದುಃಖಿಸುತ್ತಾ ಕುಳಿತ್ತಿದ್ದ. ಆ ನಾಯಿ ಎದ್ದು ಕಷ್ಟಪಟ್ಟು ಗೋಡೆಯ ಆಸರೆ ಪಡೆಯುತ್ತಾ ನಿಧಾನವಾಗಿ ಆತನೆಡೆಗೆ ಬಂದಿತು. ಆತನ ತೊಡೆಯ ಮೇಲೆ ತಲೆಯಿಟ್ಟು ತನ್ನ ಸಂಕಷ್ಟದ ಕುರುಹಾಗಿ ಚಡಪಡಿಸುತ್ತಿತ್ತು. ಆತನೂ ಅದರ ನಡುವಳಿಕೆಯನ್ನು ಅರ್ಥಮಾಡಿಕೊಂಡು ತಡೆದುಕೊಳ್ಳಲು ಆಗದೇ ಅಳಲು ಶುರುಮಾಡಿದ. ಕೊನೆಗೆ ಒಂದು ತೀಮರ್ಾನಕ್ಕೆ ಬಂದನು. ಕರಳನ್ನು ಹಿಂಡುವ ನಿಧರ್ಾರ. ಅದನ್ನು ನೋಡಿಕೊಂಡು ಹೇಳಿದ. 'ನಿನ್ನ ಕಷ್ಟವನ್ನು ನನ್ನಿಂದ ನೋಡಲು ಸಾಧ್ಯವಾಗುತ್ತಿಲ್ಲ. ನೀನು ದಯವಿಟ್ಟು ಹೊರಟುಬಿಡು' ಹೇಳುತ್ತಾ ತನ್ನ ಕಚರ್ಿಪ್ಪಿನಿಂದ ಅದರ ಉಸಿರನ್ನು ತನ್ನಿಡತದಲ್ಲಿ ಹಿಡಿದುಕೊಂಡ. ಅದು ಕೆಲ ಕ್ಷಣಗಳಲ್ಲಿ ನಾಯಿ ತನ್ನ ತಲೆಯನ್ನು ಚಾಚಿ ಬಿಟ್ಟಿತ್ತು....!
ತಾನು ಮಾಡಿದ್ದು ಸರಿಯೋ ತಪ್ಪೋ ಎಂದು ಪರಾಮಶರ್ಿಸುವ ಮುನ್ನವೇ ಅದರ ಪ್ರಾಣ ಹೋಗಿತ್ತು. ಆತ ನನ್ನಲ್ಲಿ ಕಣ್ಣೀರಿಟ್ಟು ಹೇಳಿಕೊಂಡ. ಏನೂ ಹೇಳಲಾರದ ಪರಿಸ್ಥಿತಿ ನನ್ನದು.
ಅವನು ಮಾಡಿದ್ದು ತಪ್ಪಾ ಇಲ್ಲ ಸರಿಯಾ ನೀವೇ ಹೇಳಬೇಕು....
ಹೇಳಲೇಬೇಕು... ಇಲ್ಲದಿದ್ದರೆ ನನ್ನ ತಲೆ ಸಿಡಿಯುತ್ತದೆ....
......................................................... ಪ್ಲೀಸ್ ತಿಳಿಸಿ. ಕಾಯುತ್ತಿರುತ್ತೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ