ಮಂಗಳವಾರ, ಜನವರಿ 31, 2023

ವಿಶ್ವ ಶಾಂತಿ ದಿನಾಚರಣೆ



 ಮೈಸೂರಿನ ಸಂತ ಜೋಸೆಫರ ಪ್ರಧಾನಾಲಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ  ಕ್ರೈಸ್ತ ಪೀಠದ ಸಹಯೋಗದಲ್ಲಿ  

ಸಂತ ಫಿಲೋಮಿನಾ ಪುಣ್ಯಕ್ಷೇತ್ರ ಆವರಣದಲ್ಲಿ 

ವಿಶ್ವ ಶಾಂತಿ ದಿನಾಚರಣೆ



ಮೈಸೂರು ಜನವರಿ ೩೦, ೨೦೨೩ : ವಿಶ್ವದಲ್ಲಿ ಶಾಂತಿ, ಪ್ರೀತಿ, ಐಕ್ಯತೆಯನ್ನು ನೆಲಸುವಂತೆ  ಶಾಂತಿ ದಿನಾಚರಣೆಯನ್ನು ಸರ್ವ ಧರ್ಮಗಳ ಸಂದೇಶದ ಮೂಲಕ ಆಚರಿಸಲಾಯಿತು.

ವಿಶ್ರಾಂತ ಮಹಾಧರ್ಮಾಧ್ಯಕ್ಷರು ಹಾಗೂ ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳಾದ ಪರಮ ಪೂಜ್ಯ ಡಾ. ಬೆರ್ನಾಡ್ ಮೊರಾಸ್‌ರವರು ಅಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ,      ಡಾ. ಕೆ. ಜಾವೀದ್ ನಯಿಮ್, ಮೈಸೂರು ಧರ್ಮಕ್ಷೇತ್ರದ ಎಪಿಸ್ಕೋಪಲ್ ಶ್ರೇಷ್ಠಗುರುಗಳಾದ ಅತಿ ವಂ. ಡಾಮಿನಿಕ್ ವಾಸ್ ಓಸಿಡಿಯವರು ಆಗಮಿಸಿದ್ದರು.


ಗೌರವಾನ್ವಿತ  ಅತಿಥಿಗಳಾಗಿ ಮೈಸೂರು ಧರ್ಮಕ್ಷೇತ್ರದ ಶ್ರೇಷ್ಟಗುರು ಅತಿ ವಂ. ಆಲ್ಪ್ರೆಡ್  ಜಾನ್ ಮೆಂಡೊನ್ಸಾ, ಮೈಸೂರು ವಿಶ್ವವಿದ್ಯಾಲಯದ ಕ್ರೈಸ್ತ ಧರ್ಮ ವಿಭಾಗದ ಅಧ್ಯಕ್ಷರಾದ ವಂ. ಡಾ. ವ್ಯಾಲಿಂಟಿನ್ ರಾಜೇಂದ್ರ ಕುಮಾರ್, ಮೈಸೂರು ವಿಶ್ವವಿದ್ಯಾಲಯದ ಕ್ರೈಸ್ತ ಧರ್ಮ ವಿಭಾಗದ ಪ್ರೊಪೆಸರ್ ಡಾ. ಜಾನ್ ಪೀಟರ್ ಲಾಜರ್ ಉಪಸ್ಥಿತರಿದ್ದರು.

ಸಂತ ಜೋಸೆಫರ ಪ್ರಧಾನಾಲಯದ ಧರ್ಮಗುರುಗಳಾದ ವಂ. ಗುರು ಸ್ಟ್ಯಾನಿ ಡಿ’ಆಲ್ಮೇಡಾ ರವರು ಎಲ್ಲರನ್ನೂ ಸ್ವಾಗತಿಸಿದರು. ಗಣ್ಯರು ದೀಪ ಬೆಳಗುವುದರೊಂದಿಗೆ ಮತ್ತು ಶಾಂತಿಯ ಸಂದೇಶವಾಗಿ ಪಾರಿವಾಳ ಹಾರಿಬಿಡುವುದರೊಂದಿಗೆ ಶಾಂತಿಯ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಶ್ರೀ ಚಿದಾನಂದ ಸ್ವಾಮೀಜಿ, ಶ್ರೀ ಜಾವೀದ್ ನಯಿಮ್ ಹಾಗೂ ಅತೀ ವಂ. ಡಾಮಿನಿಕ್ ವಾಸ್‌ರವರು ಶಾಂತಿಯ ಕುರಿತು ತಮ್ಮ ಮನದಾಳದ ಸಂದೇಶವನ್ನು ಸಾರಿದರು.




ಸಂತ ಆನ್ಸ್ ಪ್ರೌಢಶಾಲೆ, ಪ್ರಬೋಧನಾ ಪಲೊಟೈನ್ ಬ್ರದರ್ಸ್, ಸಂತ ಮೇರಿಸ್ ಪ್ರೌಢಶಾಲೆ,  ಶ್ರೀ ಕ್ರಿಸ್ಟಿ ಮತ್ತು ಶ್ರೀ ಟೋನಿ ತಂಡದವರು ಶಾಂತಿ ಸಂದೇಶವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟರು. 





ಕ್ರೈಸ್ತ ಧರ್ಮ ವಿಭಾಗದವರು ವಂದನಾರ್ಪಣೆಯನ್ನು ಮಾಡಿದರು.

ಶನಿವಾರ, ಜನವರಿ 28, 2023

'ಸೆಂಟ್ ರ‍್ನಾಲ್ಡ್ ಕೇಂದ್ರೀಯ ವಿದ್ಯಾಲಯ' ದಲ್ಲಿ 'ಉಚಿತ ಕಣ್ಣಿನ ತಪಾಸಣೆ ಹಾಗೂ ಜಾಗೃತಿ ಶಿಬಿರ'

    'ಒಲವು ಫೌಂಡೇಶನ್' ಹಾಗೂ ಮೈಸೂರಿನ 'ಏ.ಎಸ್.ಜಿ. ಕಣ್ಣಿನ ಆಸ್ಪತ್ರೆ' ಯ                        ಸಹಯೋಗದಲ್ಲಿ 'ಸೆಂಟ್ ರ‍್ನಾಲ್ಡ್ ಕೇಂದ್ರೀಯ ವಿದ್ಯಾಲಯ' ದಲ್ಲಿ                  'ಉಚಿತ ಕಣ್ಣಿನ ತಪಾಸಣೆ ಹಾಗೂ ಜಾಗೃತಿ ಶಿಬಿರ'


2023 ಜನವರಿ 23 ಮತ್ತು 24 ರಂದು ನಡೆದ ಎರಡು ದಿನಗಳ ಈ ಅಭಿಯಾನದ ಶಿಬಿರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಸೇರಿದಂತೆ ಸುಮಾರು 1,300 ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಕೊಂಡರು.




ಬೆಳಗ್ಗಿನ ಶಾಲಾ ಪ್ರಾರ್ಥನಾ ಸಮಯದಲ್ಲಿ ಆಸ್ಪತ್ರೆಯ ಕೇಂದ್ರೀಯ ವ್ಯವಸ್ಥಾಪಕರಾದ ವಿಜಯನ್ ಫ್ರಾನ್ಸಿಸ್,  ಒಲವು ಫೌಂಡೇಶನ್ ನ್ನಿನ ಸಂಸ್ಥಾಪಕ ರಾಜ್ಯಾದ್ಯಕ್ಷರಾದ          ರಾಬರ್ಟ್  ಕವನ್ರಾಗ್, ಆಸ್ಪತ್ರೆಯ ಉಸ್ತುವಾರಿಗಳಾದ ನಾಗೇಂದ್ರ, ಫೌಂಡೇಶನ್ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ನೇತ್ರ ತಜ್ಞರಾದ ಡಾ. ಶಿಲ್ಪಶ್ರೀ, ಡಾ. ಗಿರೀಶ್ ,ಮಧುರವರು, ಫೌಂಡೇಶನ್ನಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಜಯನ್ ರವರು ಸವಿವರವಾಗಿ ಎಲ್ಲರಿಗೂ ಕಣ್ಷಿನ ಜಾಗೃತಿಯ ಬಗ್ಗೆ ಅರಿವು ಮೂಡಿಸಿದರು. 

ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಫಾದರ್ ಸುನಿಲ್ ಮೆನೆಜೆಸ್ ರವರು ವಿದ್ಯಾರ್ಥಿಗಳಲ್ಲಿ ಶಿಬಿರದ ಮಹತ್ವವನ್ನು ತಿಳಿಕೊಟ್ಟು  ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ವಿದ್ಯಾಸಂಸ್ಥೆಯ ಮುಖ್ಯ ವ್ಯವಸ್ಥಾಪಕರಾದ ಫಾದರ್ ಲಾರೆನ್ಸ್ ಕೊರೇ, ನಿರ್ವಾಹಕರಾದ ಫಾದರ್ ಸಾಲೋಮನ್ ರೆಡ್ಡಿರವರು ಸಲಹೆ ಸೂಚನೆಗಳನ್ನು ನೀಡಿದರು. ಸಂಸ್ಥೆಯ




ಸಂಸ್ಥೆಯ ಶಿಕ್ಷಕರುಗಳು, ಶಾಲಾ ಸಿಬ್ಬಂದಿ ರ‍್ಗದವರು ಶಿಬಿರವು ಉತ್ತಮವಾಗಿ ನೆರವೇರಲು ಸಹಕರಿಸಿದರು.

ಶನಿವಾರ, ಜನವರಿ 7, 2023

ಮೈಸೂರು ಕಥೋಲಿಕ ಧರ್ಮಕ್ಷೇತ್ರಕ್ಕೆ ಆಡಳಿತಾಧಿಕಾರಿಗಳ ನೇಮಕ

 ✝️ಮೈಸೂರು ಧರ್ಮಪ್ರಾಂತ್ಯದ  ಆಡಳಿತ ಅಧಿಕಾರಿಯಾಗಿ ಬೆಂಗಳೂರಿನ ನಿವೃತ ಮಹಾ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಬರ್ನಾಡ್ ಬ್ಲೇಸಿಯಸ್ ಮೊರಾಸ್ 

ಜನವರಿ 07, 2023 ರಂದು  ಮೈಸೂರಿನ ಧರ್ಮಾಧ್ಯಕ್ಷರಾದ ಪೂಜ್ಯ ಡಾ.  ಕೆ ಎ ವಿಲಿಯಂ ಅವರನ್ನು ವೈದ್ಯಕೀಯ ರಜೆಗೆ ಕಳುಹಿಸುವ ಆದೇಶವನ್ನು ಹೊರಡಿಸಿತು ಮತ್ತು ಬೆಂಗಳೂರಿನ ಆರ್ಚ್‌ ಡಯಾಸಿಸ್‌ನ ಮಹಾಧರ್ಮಾಧ್ಯಕ್ಷರು  ನಿವೃತ್ತ ಮಹಾಧರ್ಮಾಧ್ಯಕ್ಷರಾದ ಡಾ. ಬರ್ನಾಡ್ ಮೊರಾಸ್ ಅವರನ್ನು ಮೈಸೂರು ಡಯಾಸಿಸ್‌ನ ಅಪೋಸ್ಟೋಲಿಕ್ ಅಡ್ಮಿನಿಸ್ಟ್ರೇಟರ್ ಆಗಿ ನೇಮಿಸಿತು.

ಜನವರಿ 07, 2023 ರಂದು ಸಂಜೆ ಸಂತ ಜೋಸೆಫರ ಪ್ರಧಾನಾಲಯದಲ್ಲಿ ವಿಶೇಷ ಬಲಿಪೂಜೆ ನೆರವೇರಿತು. ನೇಮಕ ಪತ್ರವನ್ನು ಓದಲಾಯಿತು. ಮೈಸೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರಾದ ಪೂಜ್ಯ ಡಾ. ಅಂತೋನಿ ವಾಜ಼ಪಿಳ್ಳಿ, ಧರ್ಮಗುರುಗಳು, ಕನ್ಯಾಸ್ತ್ರೀಯರು, ಭಕ್ತಜನರು ಭಾಗವಹಿಸಿದ್ದರು.





ಮಂಗಳವಾರ, ಡಿಸೆಂಬರ್ 20, 2022

‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ : 'ಅಲ್-ಕಬೀರ್ ಶಾಲೆ’

 ‘ಒಲವು ಫೌಂಡೇಶನ್ (ರಿ)’ ಹಾಗೂ ‘ಏ. ಎಸ್. ಜೆ. ಕಣ್ಣಿನ ಆಸ್ಪತ್ರೆ’ ಸಹಯೋಗದಲ್ಲಿ

ಶಾಲಾ ಮಕ್ಕಳಿಗೆ ‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ ಅಭಿಯಾನ











ಮೈಸೂರು ೨೦ ಡಿಸೆಂಬರ್ ೨೦೨೨ : ‘ಒಲವು ಫೌಂಡೇಶನ್ (ರಿ)’ ಹಾಗೂ ‘ಏ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಅಕ್ಟೋಬರ್ ೧೩ ಮತ್ತು ೧೪ನೇ ತಾರೀಖಿನಂದು ‘ವಿಶ್ವ ದೃಷ್ಟಿ ದಿನಾಚರಣೆ’ ಅಂಗವಾಗಿ ಶಾಲಾ ಮಕ್ಕಳಿಗೆ ಕಣ್ಣಿನ ಬಗ್ಗೆ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರದ ಅಭಿಯಾನವು ಮುಂದುವರೆದಿದೆ. 

ಮೈಸೂರಿನ ಬನ್ನಿಮಂಟಪದ ಎಸ್.ಎಸ್. ನಗರದ ‘ಅಲ್-ಕಬೀರ್ ಶಾಲೆ’ಯಲ್ಲಿ ಶಿಬಿರವನ್ನು ಇಂದು ಆಯೋಜಿಸಲಾಗಿತ್ತು. ಸುಮಾರು ೧೫೦ಕ್ಕೂ ಹೆಚ್ಚು ಶಾಲಾ ಮಕ್ಕಳು, ಶಿಕ್ಷಕ ಶಿಕ್ಷಕಿಯರು ಹಾಗೂ ಶಾಲಾ ಸಿಬ್ಬಂದಿಗಳು ಶಿಬಿರದ ಉಪಯೋಗವನ್ನು ಪಡೆದರು.

ಆಸ್ಪತ್ರೆಯ ಮೇಲ್ವಿಚಾರಕರಾದ ವಿಜಯನ್ ಫ್ರಾನ್ಸಿಸ್‌ರವರು ಕಣ್ಣಿನ ಜಾಗೃತಿಯ ಬಗ್ಗೆ ವಿವರವಾಗಿ ಎಲ್ಲರಿಗೂ ತಿಳಿಸಿಕೊಟ್ಟರು. ‘ಒಲವು ಫೌಂಡೇಶನ್’ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಇ. ಕವನ್ರಾಗ್, ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಸಾಪ್ಟ್ ಸ್ಕಿಲ್ ತರಬೇತಿದಾರರಾದ ಸಯ್ಯದ್ ಅಫ್ತಾಬ್,……ಆಸ್ಪತ್ರೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ನಾಗೇಂದ್ರ, ಡಾ. ಶಿಲ್ಪಶ್ರೀ, ಫೌಂಡೇಶನ್ನಿನ ಮನೋಹರ್, ಶಾಲಾ ಮೇಲ್ವಿಚಾರಕರಾದ ಸೈದಾ ನಿದಾ, ಶಿಕ್ಷಕ ಶಿಕ್ಷಕಿ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು ಶಿಬಿರ ಉತ್ತಮವಾಗಿ ನೆರವೇರಲು ಸಹಕರಿಸಿದರು.


ಗುರುವಾರ, ಡಿಸೆಂಬರ್ 15, 2022

ಲಕ್ಷ್ಮಿಸಾಗರ ಸರ್ಕಾರಿ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಜಾಗೃತಿ ಶಿಬಿರ

 

ಪಾಂಡವಪುರ 13 ಡಿಸೆಂಬರ್, 2022 : ಒಲವು ಫೌಂಡೇಶನ್ (ರಿ) ಹಾಗೂ ಎವಿಜೆ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಲಕ್ಷ್ಮಿಸಾಗರ ಸರ್ಕಾರಿ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಜಾಗೃತ ಶಿಬಿರವನ್ನು ಆಯೋಜಿಸಲಾಗಿತ್ತು.. ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿಯವರು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಇದರ ಅನುಕೂಲತೆಯನ್ನು ಪಡೆದರು.



ಎನ್.ಆರ್. ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ರಾಬರ್ಟ್ ಕವನ್ರಾಗ್

 ಮೈಸೂರು ಎನ್.ಆರ್.ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳ್ಳಿಯಲು ಸಮಾಜ ಸೇವಕ, ಕಲಾವಿದ, ಪತ್ರಕರ್ತ, ಸಂಗೀತ ನಿರ್ದೇಶಕ ರಾಬರ್ಟ್ ಇಮ್ಮಾನ್ಯುಯೆಲ್ ಕವನ್ರಾಗ್ ನಿರ್ಧಾರ


ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಮಾಡಿದ ರಾಬರ್ಟ್ ರವರಿಗೆ ರಾಜಕೀಯ ಕ್ಷೇತ್ರದಲ್ಲೂ ಕೆಲಸ ಮಾಡಿದ ಅನುಭವವಿದೆ. ಹಲವಾರು ಸಂಘಸಂಸ್ಥೆಗಳನ್ನು ಹುಟ್ಟು ಹಾಕಿದ ಅನುಭವಗಳು ಇದೆ. 

ಸಂಗೀತ, ಸಾಹಿತ್ಯ, ಸೇವಾ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಮಾಡಿ ಯಾವುದೇ ಹಣ, ಅಧಿಕಾರಗಳ ಆಮಿಷಗಳಿಗೆ ಒಳಗಾಗದೆ


ಆಧ್ಯಾತ್ಮಿಕ, ಆತ್ಮೀಕ, ಮಾನಸಿಕ ಏಳಿಗೆಗೆ ತಮ್ಮದೇ ಶ್ರಮವನ್ನು ನೀಡಿದ್ದಾರೆ.

ಮಕ್ಕಳ, ಯುವಜನತೆಯ ಜ್ಞಾನಾಭಿವೃದ್ದಿಯೇ ಮುಂದಿನ ಸಾಮಾಜಿಕ ಏಳಿಗೆಗೆ ಸೂಕ್ತವಾದ ಬಲ ಎಂಬುದ್ದನ್ನು ಎಲ್ಲರ ಮನದಲ್ಲೂ ಸ್ಪಷ್ಟೀಕರಿಸುತ್ತಿದ್ದಾರೆ.

ಕೆಳವರ್ಗ, ನಿರ್ಗತಿಕ,‌ ಬಡವನಲ್ಲಿಯೂ ಕೂಡ ಸಾಮಾಜಿಕ ಕಳಕಳಿಯ ನಾಯಕತ್ವ ಇದೆ ಎಂಬುವುದು ಇವರ ನಂಬಿಕೆ.

ಬಡತನದಲ್ಲಿ ಹುಟ್ಟಿ ಬಡತನದಲ್ಲಿಯೇ ಬದುಕಿ ರಾಜ್ಯ, ದೇಶವನ್ನು ಆಳಿದ ಅನೇಕ ಮಹಾತ್ಮರನ್ನು ಆದರ್ಶವಾಗಿಟ್ಟುಕೊಂಡು ಜೀವಿಸುತ್ತಿದ್ದಾರೆ. ಅನೇಕ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿದ್ದರು ಸಾಮಾನ್ಯರಾಗಿದ್ದಾರೆ‌

2023 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಮಿಳಿಯಲು‌ ನಿರ್ಧರಿಸಿದ್ದಾರೆ.

"ನಾನು ಜನಸೇವಕ, ಮತದಾರರೇ ಯಜಮಾನರು...ಸಾಮಾಜ ಹಿತಚಿಂತನೆಯಲ್ಲಿ ಜನರಿಂದ ಆಯ್ಕೆಯಾದ ಎಲ್ಲರೂ, ಜನಸೇವೆಯಲ್ಲಿ ದುಡಿಯುತ್ತೇವೆ ಎಂದು ಬಂದ ಎಲ್ಲರ ಒಡಗೂಡಿ ಜನರ ಸೇವೆ ಮಾಡುವ ಮಹತಾಕಾಂಕ್ಷೆ ನನ್ನದು* ಎನ್ನುವ ಇವರ ಸಮತೆ, ಸೇವೆಯ ಗುಣಗಳು ಮುಂದಿನ ಚುನಾವಣೆಯಲ್ಲಿ ನಿರ್ಧರಿಸಲ್ಪಡುತ್ತದೆ.

ಬುಧವಾರ, ಡಿಸೆಂಬರ್ 14, 2022

ಮೈಸೂರಿನ ಪುಷ್ಟಗಿರಿಯ ‘ಬಾಲಯೇಸು ದೇವಾಲಯ’ ಧರ್ಮಕೇಂದ್ರ ಗಾಯನ ವೃಂದ ಪ್ರಥಮ ಸ್ಥಾನ




ಮೈಸೂರು 11 ಡಿಸೆಂಬರ್ 2022 : ಕಾರ್ಮೆಲ್ ಕ್ಯಾಥೋಲಿಕ್ ಅಸೋಸಿಯೇಷನ್‌ರವರು ಕ್ರಿಸ್ತಜಯಂತಿ ಪ್ರಯುಕ್ತ ಆಯೋಜಿಸಿದ್ದ 3೦ನೇ ವರ್ಷದ ‘ಕ್ಯಾರೊಲ್ ಗಾಯನ ಸ್ಪರ್ಧೆ' ಯಲ್ಲಿ ಮೈಸೂರಿನ ಪುಷ್ಪಗಿರಿಯ ‘ಬಾಲ ಯೇಸು ದೇವಾಲಯ’  ಧರ್ಮಕೇಂದ್ರದ ಗಾಯನ ವೃಂದ  ಪ್ರಥಮ ಬಹುಮಾನ ಗಳಿಸಿದ್ದಾರೆ. 


: Song video :


ಸೋಮವಾರ, ಡಿಸೆಂಬರ್ 12, 2022

'ಸಂತ ಜೋಸೆಫರ ಶಿಕ್ಷಣ ಸಂಸ್ಥೆ'ಗೆ ಚಾಂಪಿಯನ್‌ಶಿಪ್ ಟ್ರೋಫಿ



ಕಾರ್ಮೆಲ್ ಕ್ಯಾಥೋಲಿಕ್ ಅಸೋಸಿಯೇಷನ್ ಆಯೋಜಿಸಿದ್ದ 

‘ಕಾರ್ಮೆಲ್ ಕ್ಯಾರೊಲ್ ಗಾಯನ ಸ್ಪರ್ಧೆ – 2022’ ಯಲ್ಲಿ ಚಾಂಪಿಯನ್‌ಶಿಪ್ ಟ್ರೋಫಿ


ಮೈಸೂರು 11 ಡಿಸೆಂಬರ್ 2022 : ಕಾರ್ಮೆಲ್ ಕ್ಯಾಥೋಲಿಕ್ ಅಸೋಸಿಯೇಷನ್‌ರವರು ಕ್ರಿಸ್ತಜಯಂತಿಯ ಪ್ರಯುಕ್ತ ಆಯೋಜಿಸಿದ್ದ ೩೦ನೇ ವರ್ಷದ ‘ಕ್ಯಾರೊಲ್ ಗಾಯನ ಸ್ಪರ್ಧೆಯಲ್ಲಿ ಮೈಸೂರಿನ ಜಯಲಕ್ಷಿö್ಮಪುರಂನಲ್ಲಿರುವ ಸೆಂಟ್ ಜೋಸಪ್ಸ್ ಇನ್ಸ್ಟಿಟ್ಯೂಷನ್ಸ್ ಗೆ    ‘ಚಾಂಪಿಯನ್‌ಶಿಪ್ ಟ್ರೋಪಿ’ಯನ್ನು ಪಡೆದಿದ್ದಾರೆ. 

  • 1-4 ನೇ ತರಗತಿಯವರ ತಂಡಕ್ಕೆ ಎರಡನೆಯ ಸ್ಥಾನ 
  • 5-7 ನೇ ತರಗತಿಯವರ ತಂಡಕ್ಕೆ ಕನ್ನಡ ಗಾಯನದಲ್ಲಿ ಮೊದಲನೆಯ ಸ್ಥಾನ 
  • 5-7 ನೇ ತರಗತಿಯವರ ತಂಡಕ್ಕೆ ಇಂಗ್ಲೀಷ್ ಗಾಯನದಲ್ಲಿ  ಮೂರನೆಯ ಸ್ಥಾನ 
  • 8-9 ನೇ ತರಗತಿಯವರ ತಂಡಕ್ಕೆ ಕನ್ನಡ ಗಾಯನದಲ್ಲಿ ಮೊದಲನೆಯ ಸ್ಥಾನ
  • 8-10 ನೇ ತರಗತಿಯವರ ತಂಡಕ್ಕೆ ಇಂಗ್ಲೀಷ್ ಗಾಯನದಲ್ಲಿ ಎರಡನೆಯ ಸ್ಥಾನಗಳನ್ನು ಪಡೆದಿದ್ದಾರೆ.

ಸಂಸ್ಥೆಯ ಸಂಗೀತ ಶಿಕ್ಷಕರಾದ ಇಮ್ಮಾನ್ಯುಯೆಲ್ ಸ್ಯಾಂಸನ್, ರೋಷನ್, ಶಾಲಮ್ ಸಾಲೋಮನ್ ರವರ ತರಬೇತಿ ನೀಡಿರುತ್ತಾರೆ. ಎಲ್ಲಾ ತಂಡಗಳು ಉತ್ತಮವಾಗಿ ಹಾಡಿ ಎಲ್ಲರ ಪ್ರಶಂಸನೆಗೆ ಪಾತ್ರರಾಗಿದ್ದಾರೆ.




ಭಾನುವಾರ, ಡಿಸೆಂಬರ್ 11, 2022

'ಮೈಸೂರು ಪ್ರದೇಶ ಪರಿಷತ್' : ಕ್ರಿಸ್ತಜಯಂತಿ ಗಾಯನ ಸ್ಪರ್ಧೆ

ಮೈಸೂರು _10 _ಡಿಸೆಂಬರ್ 2022 : ದಕ್ಷಿಣ ಭಾರತ ಕ್ರೈಸ್ತ ಸಬೆ - ಕರ್ನಾಟಕ ದಕ್ಷಿಣ ಸಭಾ ಪ್ರಾಂತ್ಯದ 'ಮೈಸೂರು ಪ್ರದೇಶ ಪರಿಷತ್' ಆಯೋಜಿಸಿದ್ದ 'ಕ್ರಿಸ್ತ ಜಯಂತಿ ಗಾಯನ ಸ್ಪರ್ಧೆ' ಯು ಮೈಸೂರಿನ ವೆಸ್ಲಿ ಚರ್ಚ್ನ ಗಿಲ್ಡ್ ಹಾಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು. ವಿವಿಧ ಸ್ಥಳದ  ಸಭೆಗಳಿಂದ 'ಗಾಯನ ವೃಂದ'ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಕ್ರಿಸ್ತರ ಮಹಿಮಾ ಗೀತೆಗಳನ್ನು ಪ್ರಸ್ತುತ ಪಡಿಸಿದರು. ವಿಜೇತರಿಗೆ ನಗದು ಮತ್ತು ವಿನ್ನರ್ ಕಪ್ , ಹಾಗೂ ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಾಯಿತು.

ಮೈಸೂರು ಪ್ರದೇಶ ಪರಿಷತ್' ನ ಆಧ್ಯಕ್ಷರಾದ                  ರೆ. ಗುರುಶಾಂತರವರು ಸಂಪೂರ್ಣ ಜವಾಬ್ದಾರಿ ವಹಿಸಿದ್ದರು. ವೆಸ್ಲಿ ಮಹಾದೇವಾಲಯದ ಸಭಾಪಾಲಕರಾದ ರೆ. ಎಲೀಷ್ ಕುಮಾರ್ ರವರು ಎಲ್ಲಾ ವ್ಯವಸ್ಥೆಗಳಿಗೆ ಅಚ್ಚುಕಟ್ಟಾಗಿ ನೆರವೇರಲು ಸಹಕರಿಸಿದರು.

ಮೈ.ಪ್ರ.ಪ‌.ನ ಕಾರ್ಯದರ್ಶಿ ಜಾರ್ಜ್ ಮೋಹನ್ ಕುಮಾರ್, ಹಾಗೂ ಎಲ್ಲಾ ಕಾರ್ಯಕಾರಿ ಸಮಿತಿಯವರು ಹಾಗೂ ದೇವಾಲಯದ ಕಾರ್ಯದರ್ಶಿ ಈವನ್ ತೇಜ, ಸಂಧ್ಯಾ ಕಿರಣ್, ಡೆಬೋರ, ಸದಸ್ಯರು ಹಾಗೂ ವೆಸ್ಲಿ ಮಹಾದೇವಾಲಯದ ಯುವಕ ಯುವತಿಯರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು. 

 ಸಂಗೀತ ನಿರ್ದೇಶಕ ಟೋನಿ ರೋಸಾ಼ರಿಯೋ, ಸಂಗೀತ ನಿರ್ದೇಶಕ ಹಾಗೂ ಒಲವು ಫೌಂಡೇಶನ್' ನ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್, ಸಂತ ಜೋಸೆಫರ ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯರಾದ ಜೋಸೆಫ್ ಲಾರೆನ್ಸ್  ಗಾಯನ ಸ್ಪರ್ಧೆಯ ತೀರ್ಪುಗಾರರಾಗಿದ್ದರು.









ಶನಿವಾರ, ಡಿಸೆಂಬರ್ 10, 2022


ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ  ಪರಮಪೂಜ್ಯ ಡಾ. ಕೆ.ಎ.ವಿಲಿಯಂ ರವರನ್ನು ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು  ಸಿದ್ದರಾಗಿರುವ ರಾಬರ್ಟ್ ಇಮ್ಮಾನ್ಯುಯೆಲ್ ಕವನ್ರಾಗ್‌ರವರು  ಭೇಟಿ ಮಾಡಿ ಮಾತುಕತೆ ನಡೆಸಿ ಆಶೀರ್ವಾದವನ್ನು ಪಡೆದರು. ಈಗಾಗಲೇ ಕವನ್ರಾಗ್‌ರವರು ಪತ್ರಿಕಾಗೋಷ್ಟಿ ನಡೆಸಿ ತಾವು ಕಣಕ್ಕಿಳಿಯುವುದಾಗಿ ಘೋಷಿಸಿದ್ದರು. 

‘ಒಲವು ಪೌಂಡೇಶನ್’ ನ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಸಂಚಾಲಕರಾದ ವಿಲಿಯಂ ಪುಷ್ಪರಾಜ್ ಮತ್ತು ಸಿ.ಎಸ್.ಐ. ಸಭಾಪಾಲನ ಸಮಿತಿ ಸದಸ್ಯರಾದ ಅಭಿಲೇಕ್ ಕುಮಾರ್ ವಿ. ರವರು ಜೊತೆಯಲ್ಲಿದ್ದರು. 






ಶುಕ್ರವಾರ, ಡಿಸೆಂಬರ್ 9, 2022

ಮೈಸೂರಿನ ಶಿಕ್ಷಕರ್ಣಿ ಕೇಂದ್ರೀಯ ಶಾಲೆಯಲ್ಲಿ ಪುಟ್ಟ ಮಕ್ಕಳ 'ಫ್ಯಾನ್ಸಿ ಡ್ರೆಸ್' ಹಬ್ಬ





ಮೈಸೂರು ೦೯ ಡಿಸೆಂಬರ್, ೨೦೨೨ : ಮೈಸೂರಿನ ಹೆಬ್ಬಾಳದ ಶಿಕ್ಷಕರ್ಣಿ ಕೇಂದ್ರೀಯ ಶಾಲೆಯಲ್ಲಿ ಇಂದು ‘ಎಲ್.ಕೆ.ಜಿ., ಯುಕೆಜಿ’ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯು ಆಯೋಜಿಸಲಾಗಿತ್ತು. ಇದರು ಕೇವಲ ಸ್ಪರ್ಧೆಯಾಗಿದರೆ, ಮಕ್ಕಳು ಅಂದಚೆAದವಾಗಿ ವಿವಿಧ ಅಲಂಕಾರಿಕ ಉಡುಗೆ ತೊಡುಗೆಗಳೊಂದಿಗೆ ಸಮಾಜಕ್ಕೆ ಹಾಗೂ ವಿಶ್ವಕ್ಕೆ ಸಂದೇಶ ನೀಡಿದರು. ಮಹಾತ್ಮ ಗಾಂಧೀಜಿ, ಸೈನಿಕರು, ಪತ್ರಿಕೆಗಳ ಮೌಲ್ಯ, ಹಸಿರಿನ ಮಹತ್ವ, ನೀರಿನ, ನೆಲದ ಶ್ರೇಷ್ಟತೆ, ಹುಲಿ, ಚಿರತೆ, ಮೊಲ, ಚಿಟ್ಟೆಗಳಾಗಿ ಎಲ್ಲರನ್ನೂ ರಂಜಿಸಿದರು.

ಶಿಕ್ಷಕರ್ಣಿ ಶಾಲೆಯ ಪ್ರಾಂಶುಪಾಲರಾದ ವಿಲಿಯಂ ಪುಷ್ಪರಾಜ್‌ರವರು, ತೀರ್ಪುಗಾರರಾದ ಮೈಸೂರಿನ ಕೆ.ಎನ್.ಸಿ. ಶಾಲೆಯ ಸಹ ಶಿಕ್ಷಕಿಯಾದ ಅಮಿತಾ ವಿ., ‘ಒಲವು ಫೌಂಡೇಶನ್’ ನ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕಿ ಶಾಲಿನಿ ಜೇಮ್ಸ್ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಶಿಕ್ಷಕರು, ಶಿಕ್ಷಕೇತರರು, ಸಹಾಯಕ ಸಿಬ್ಬಂಧಿ ವರ್ಗದವರು, ಪೋಷಕರುಗಳಿಗೂ ಸೇರಿದಂತೆ ಮಕ್ಕಳ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಉತ್ತೇಜನ ನೀಡಿದರು. 


ಶನಿವಾರ, ಡಿಸೆಂಬರ್ 3, 2022

ಅಂತರಶಾಲಾ ಕೊಕೊ ಪಂದ್ಯಾವಳಿ

 ‘ಶಿಕ್ಷಕರ್ಣಿ ಕೇಂದ್ರೀಯ ಶಾಲೆ’ ಮತ್ತು ‘ಒಲವು ಫೌಂಡೇಶನ್ (ರಿ)’ ಸಹಯೋಗದಲ್ಲಿ

ಅಂತರಶಾಲಾ ಕೊಕೊ ಪಂದ್ಯಾವಳಿ



ಮೈಸೂರು ೦೩ ಡಿಸೆಂಬರ್, ೨೦೨೨ : ಮೈಸೂರು ನಗರದ ಹೆಬ್ಬಾಳದಲ್ಲಿರುವ ‘ಶಿಕ್ಷಕರ್ಣಿ ಕೇಂದ್ರೀಯ ಶಾಲೆ’ಯಲ್ಲಿ ಶಾಲಾಸಂಸ್ಥಾಪಕರಾದ ‘ದಿ. ವಿ. ವೆಂಕಟಗಿರಿಯವರ ಸ್ಮರಣಾರ್ಥ’  ಅಂತರಶಾಲಾ ಕೊಕೊ ಪಂದ್ಯಾವಳಿಯನ್ನು ‘ಒಲವು ಫೌಂಡೇಶನ್ (ರಿ)’ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ವಿವಿಧ ಶಾಲೆಗಳ ೨೦  ವಿದ್ಯಾರ್ಥಿ ವಿದ್ಯಾರ್ಥಿನಿಯರ ತಂಡಗಳು ಪಂದ್ಯದಲ್ಲಿ ಪಾಲುಗೊಂಡಿದ್ದರು. 

ಬೆಳಗ್ಗೆ ೯ ಗಂಟೆಗೆ ಪಂದ್ಯಾವಳಿ ಪಾರಿವಾಳಗಳನ್ನು ಹಾರಿಸುವುದರ ಮೂಲಕ ಚಾಲನೆ ನೀಡಿದರು. ಇದಕ್ಕು ಮುನ್ನ ದಿವಂಗತರ ಪೋಟೋಗೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿ ಸ್ಮರಿಸಲಾಯಿತು.

ವೇದಿಕೆಯಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ಲೋಕೇಶ್ ವಿ. ಖಜಾಂಚಿ ಆರ್. ಲಿಂಗರಾಜು, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಸೋಮಶೇಖರ್, ‘ಒಲವು ಫೌಂಡೇಶನ್’ನ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್, ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಹಿರಿಯ ದೈಹಿಕ ಶಿಕ್ಷಕರಾದ ವೇಣುಗೋಪಾಲ್, ಶಾಲೆಯ ಪ್ರಾಂಶುಪಾಲರಾದ ವಿಲಿಯಂ ಪುಷ್ಪರಾಜ್, ಉಪಪ್ರಾಂಶುಪಾಲರಾದ ಸರಿತಾ ಆರ್. ಶೆಟ್ಟಿ, ಮುಖ್ಯೋಪಾಧ್ಯಾಯರಾದ ಏ. ಎನ್. ನಂಜೇಗೌಡರು ಉಪಸ್ಥಿತರಿದ್ದರು. ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಹಾಜರಿದ್ದರು. ಶಿಕ್ಷಕರ್ಣಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂಧಿಗಳು ಕಾರ್ಯಕ್ರಮವನ್ನು ಅÀಚ್ಚುಕಟ್ಟಾಗಿ ನೆರವೇರಿಸಲು ಸಹಕರಿಸಿದರು.

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...